ಪಾರ್ಕ್ ಜೀಬ್ರಾ ಸಹ ಸಂಸ್ಥಾಪಕ ಉದಯ್ ಮೈತ್ರಾ
ಬೆಂಗಳೂರು: ನಗರದ ವಾಹನದಟ್ಟಣೆ ಮಧ್ಯೆ ವಾಹನಗಳನ್ನು ಪಾರ್ಕಿಂಗ್ ಮಾಡುವುದು ಹರಸಾಹಸದ ಕೆಲಸವೇ ಸರಿ. ನಾಗರಿಕರ ಈ ಸಮಸ್ಯೆಯನ್ನು ತಡೆಗಟ್ಟಲು ಪಾರ್ಕ್ ಜೀಬ್ರಾ ಎಂಬ ಸ್ಟಾರ್ಟ್ ಅಪ್ ತಂತ್ರಜ್ಞಾನವನ್ನು ಬಳಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. 2015ರಲ್ಲಿ ಸ್ಥಾಪನೆಯಾದ ಈ ಸ್ಟಾರ್ಟ್ಅಪ್ ಕೆನಡಾ ಮತ್ತು ಭಾರತದಲ್ಲಿ ತಂತ್ರಜ್ಞಾನವನ್ನು ಒಳಗೊಂಡಿದ್ದು ಉದಯ್ ಮೈತ್ರಾ, ಟಿ.ಎನ್.ಪ್ರತಾಪ್ ಮತ್ತು ಅಂಟೊನ್ ಸ್ವೆಂಡ್ರೊವ್ಸ್ಕಿ ಇದನ್ನು ಸ್ಥಾಪಿಸಿದ್ದಾರೆ.
ಈ ಸ್ಟಾರ್ಟ್ ಅಪ್ ನ್ನು ಸ್ಥಾಪಿಸಲು ಮುಖ್ಯ ಉದ್ದೇಶ ನಗರದ ವಾಹನದಟ್ಟಣೆ ಮತ್ತು ಜನದಟ್ಟಣೆ ಪ್ರದೇಶಗಳಲ್ಲಿ ಕೂಡ ಯಾವುದೇ ಅಡೆತಡೆಯಿಲ್ಲದೆ ಗ್ರಾಹಕರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸುವುದು. ಇದಕ್ಕಾಗಿ ಆಪ್ ನ್ನು ಆರಂಭಿಸಲಾಗಿದ್ದು, ಆನ್ ಲೈನ್, ಸಾಮಾಜಿಕ ಮಾಧ್ಯಮ, ರೇಡಿಯೋ ಹಾಗೂ ಇನ್ನೂ ಹಲವು ಬಗೆಗಳಿಂದ ನಮ್ಮ ಸ್ಟಾರ್ಟ್ಅಪ್ ನ್ನು ಪ್ರಚಾರ ಮಾಡುತ್ತೇವೆ. ಈ ಆಪ್ ಮೂಲಕ ವಾಹನಗಳ ಪಾರ್ಕಿಂಗ್ ಗೆ ಜಾಗವನ್ನು ಹುಡುಕಿ, ಮೀಸಲು ಮಾಡಿ ಮತ್ತು ಮುಂಚಿತವಾಗಿ ಹಣ ಪಾವತಿ ಮಾಡಬಹುದು ಎನ್ನುತ್ತಾರೆ ಪಾರ್ಕ್ ಜೀಬ್ರಾದ ಸಹ ಸ್ಥಾಪಕ ಉದಯ್ ಮೈತ್ರಾ.
ವೈಟ್ ಫೀಲ್ಡ್ ನ ಫಿಯೊನಿಕ್ಸ್ ಮಾಲ್ ಗೆ ಹೆಚ್ಚಾಗಿ ಭೇಟಿ ನೀಡುವ ಸಾಫ್ಟ್ ವೇರ್ ಎಂಜಿನಿಯರ್ 28 ವರ್ಷದ ಕಾರ್ತಿಕ್, ನಾನು ವಾರಾಂತ್ಯಗಳಲ್ಲಿ ಫಿಯೊನಿಕ್ಸ್ ಮಾಲ್ ಭೇಟಿ ಮಾಡುತ್ತಿರುತ್ತೇನೆ. ಮಾಲ್ ಒಳಗೆ ಪ್ರವೇಶಿಸಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಟ್ರಾಫಿಕ್, ಕಾರಿನಲ್ಲಿ ಸಾಲಿನಲ್ಲಿ ಹೋಗಿ ಪಾರ್ಕಿಂಗ್ ಟಿಕೆಟ್ ತೆಗೆದುಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕು. ಇಂತಹ ಪರಿಸ್ಥಿತಿಯಲ್ಲಿ ವಾಹನಗಳ ಪಾರ್ಕಿಂಗ್ ಗೆ ಆಪ್ ಇದ್ದರೆ ತುಂಬಾ ಸಹಾಯವಾಗುತ್ತದೆ ಎನ್ನುತ್ತಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆ ಎಂಬುದು ಸ್ವತಃ ನನಗೆ ಅನುಭವವಾಗಿದೆ. ಈ ಸೇವೆಯನ್ನು ನಾವು ದೆಹಲಿ ಮತ್ತು ಮುಂಬೈಯಲ್ಲಿ ಕೂಡ ಆರಂಭಿಸಿದ್ದೇವೆ. ನಾವು ಈಗಾಗಲೇ ದೆಹಲಿಯಲ್ಲಿ ಶೋಧನೆ ಆರಂಭಿಸಿದ್ದು ಅಲ್ಲಿ ಕೂಡ ಈ ಸೇವೆಯನ್ನು ಆರಂಭಿಸುತ್ತೇವೆ ಎಂದರು.
ಪಾರ್ಕ್ ಜೀಬ್ರಾ ಶಾಪಿಂಗ್ ಮಾಲ್ ಮತ್ತು ಹಬ್ ಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ.ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಗಳಿರುವಲ್ಲಿ ಜನರಿಗೆ ಪಾರ್ಕಿಂಗ್ ಸೌಲಭ್ಯಗಳಿಗೆ ಈ ಆಪ್ ಮೂಲಕ ಸಹಾಯವಾಗದಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos