ಬೆಂಗಳೂರು: ರಾಜ್ಯ ಸರ್ಕಾರ 2018ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಮುಂದಿನ ವರ್ಷದ ಸರ್ಕಾರಿ ನೌಕರರು ಒಟ್ಟು 23 ಸಾರ್ವತ್ರಿಕ ರಜೆಗಳನ್ನು ಪಡೆಯಲಿದ್ದಾರೆ.
2018ರಲ್ಲಿ ವಾರಾಂತ್ಯದ ಬದಲಿಗೆ ಬಹುಪಾಲು ವಾರದ ದಿನಗಳಲ್ಲೇ ಹೆಚ್ಚು ಹಬ್ಬ ಹಾಗೂ ಜಯಂತಿಗಳು ಬಂದಿರುವ ಹಿನ್ನಲೆಯಲ್ಲಿ ಈ ಬಾರಿಯ ಸಾರ್ವತ್ರಿಕ ರಜೆ ಪಟ್ಟಿ 23ಕ್ಕೆ ತಲುಪಿದೆ, ಈ ಮುಂಚಿನ ವರ್ಷಗಳಲ್ಲ ವಾರ್ಷಿಕ ರಜಾ ದಿನಗಳ ಪಟ್ಟೆ 18 ರಿಂದ 19ಕ್ಕೆ ಸೀಮಿತವಾಗಿರುತ್ತಿತ್ತು.
ಸರ್ಕಾರಿ ನೌಕರರು ಒಟ್ಟಾರೆಯಾಗಿ ಮುಂದಿನ ವರ್ಷ 23 ಸಾರ್ವತ್ರಿಕ ರಜೆಗಳು, 52 ಭಾನುವಾರಗಳು, 12 ಎರಡನೇ ಶನಿವಾರದ ರಜೆಗಳು ಸೇರಿದಂತೆ ಒಟ್ಟು 87 ರಜೆಗಳನ್ನು ಅನುಭವಿಸಲಿದ್ದಾರೆ.
ಚಂದ್ರಮಾನ ಯುಗಾದಿ (ಮಾ.18)ರಂದು ಭಾನುವಾರ ಬರಲಿದ್ದು, ಡಾ.ಅಂಬೇಡ್ಕರ್ ಜಯಂತಿ ಏ.14ರಂದು 2ನೇ ಶನಿವಾರ ಬರಲಿರುವ ಕಾರಣ ರಜಾಪಟ್ಟಿಯಲ್ಲಿ ಸೇರಿಲ್ಲ.