ರಾಜ್ಯ

ಬಂಡವಾಳ ಹೂಡಿಕೆಗೆ ಕರ್ನಾಟಕ ನಂ.1 ರಾಜ್ಯ: ಸಚಿವ ದೇಶಪಾಂಡೆ

Manjula VN
ಬೆಂಗಳೂರು; ಬಂಡವಾಳ ಹೂಡಿಕೆಗೆ ಕರ್ನಾಟಕ ನಂ.1 ರಾಜ್ಯ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರು ಗುರುವಾರ ಹೇಳಿದ್ದಾರೆ. 
ಬಂಡವಾಳ ಹೂಡಿಕೆಯಲ್ಲಿ ಕರ್ನಾಟರ ರೂ.1,47,625 ಕೋಟಿ ಬಂಡವಾಳವನ್ನು ಆಕರ್ಷಿಸಿ ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಗಳಿಸಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ. 
ಕಳೆದ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಬರೋಬ್ಬರಿ ರೂ.1.47 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವ ಮೂಲಕ ರಾಜ್ಯಸತತ ಮೂರನೇ ಬಾರಿಗೆ ನಂ.1 ಆಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅಲ್ಲದೆ, ಗುಜರಾತ್ ರಾಜ್ಯವನ್ನು ಹಿಂದಿಕ್ಕಿದೆ. 
ಇಲಾಖೆಯ ದಾಖಲೆಗಳ ಪ್ರಕಾರ ರೂ.65,741 ಕೋಟಿ ಬಂಡವಾಳ ಆಕರ್ಷಿಸಿರುವ ಗುಜರಾತ್ ರಾಜ್ಯ 2ನೇ ಸ್ಥಾನದಲ್ಲಿದ್ದರೆ, ರೂ.25, 018 ಕೋಟಿ ಮೂಲಕ ಮಹಾರಾಷ್ಟ್ರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಕ್ರಮವಾಗಿ ರೂ.24, 013 ಕೋಟಿ ಹಾಗೂ ರೂ.12, 657 ಕೋಟಿ ಹೂಡಿಕೆಯೊಂದಿಗೆ ಅನಂತರದ ಎರಡು ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. 
SCROLL FOR NEXT