ಬೆಳಗಾವಿ: ಸುವರ್ಣ ಸೌಧದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಟ್ಟಿದ್ದಾರೆ. ಮೃತರನ್ನು ಶಿವಮೊಗ್ಗ ಕೆಎಸ್‍ಆರ್‍ಪಿ ತುಕಡಿಯ ಸಿಬ್ಬಂದಿ ಎ.ಟಿ.ತಿಪ್ಪೇಸ್ವಾಮಿ(57) ಎಂದು ಗುರುತಿಸಲಾಗಿದೆ.
ಸುವರ್ಣವಿಧಾನಸೌಧದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್‍ಆರ್‍ಪಿ ತುಕಡಿಗೆ ಸೇರಿದ್ದ ಇವರಿಗೆ ಖಾನಾಪುರ ಪಂಚಾಯ್ತಿ ಕಲ್ಯಾಣಮಂಟಪದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೃದಯಾಘಾತವಾದ ಕೂದಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.