ರಾಜ್ಯ

ಬೆಂಗಳೂರು: ಆರ್.ಟಿ.ನಗರದಲ್ಲಿ ಹೊಟೇಲ್ ಮಾಲಿಕರ ಮೇಲೆ ಪೊಲೀಸರ ಹಲ್ಲೆ, ವೈರಲ್ ಆದ ವಿಡಿಯೊ

Sumana Upadhyaya
ಬೆಂಗಳೂರು: ನಿಗದಿತ ಕಾಲಾವಧಿಗಿಂತ ಹೆಚ್ಚು ಸಮಯ ಹೊಟೇಲ್ ತೆರಿದಿದ್ದರಿಂದ ಆರ್ ಟಿ ನಗರದ ದಿನ್ನೂರು ಮುಖ್ಯ ರಸ್ತೆಯಲ್ಲಿ ಹೊಟೇಲ್ ನ ಮಾಲಿಕ ಮತ್ತು ಗ್ರಾಹಕರ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್ಟೇಬಲ್ ಹಲ್ಲೆ ನಡೆಸಿರುವ ಘಟನೆ ನಿನ್ನೆ ನಡೆದಿದೆ. ಅದು ವಿಡಿಯೊದಲ್ಲಿ ದಾಖಲಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವು ಸುದ್ದಿ ವಾಹಿನಿಗಳಲ್ಲಿ ಕೂಡ ಪ್ರಸಾರವಾಗಿದೆ.
ಹೊಟೇಲ್ ನ ಮಾಲಿಕರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಕೇಸು ದಾಖಲಿಸಿದ್ದಾರೆ. ಜೆ.ಸಿ, ನಗರ ಉಪ ವಿಭಾಗದ ಎಸಿಪಿ ಮಂಜುನಾಥ್ ಬಾಬು ಕಾನ್ಸ್ಟೇಬಲ್ ಜೊತೆ ಶೆಟ್ಟಿ ಲಂಚ್ ಹೋಮ್ ಎಂಬ ಹೊಟೇಲ್ ನ ಮಾಲಿಕ ರಾಜೀವ್ ಶೆಟ್ಟಿ ಅವರಿಗೆ ನೊಟೀಸ್ ಜಾರಿ ಮಾಡಿದ್ದರು. ಆದರೆ ಶೆಟ್ಟಿ ನೊಟೀಸ್ ಗೆ ಬೆಲೆ ನೀಡದೆ ಮಧ್ಯರಾತ್ರಿಯವರೆಗೂ ಹೊಟೇಲನ್ನು ತೆರೆದಿದ್ದರು.
ಇದರಿಂದ ಆಕ್ರೋಶಗೊಂಡ ಪೊಲೀಸ್ ಅಧಿಕಾರಿ ನಿನ್ನೆ ರಾತ್ರಿ ಹೊಟೇಲ್ ಗೆ ಹೋಗಿ ಶೆಟ್ಟಿ ಮೇಲೆ ಹಲ್ಲೆ ನಡೆಸಿದರು. ಕಾನ್ಸ್ಟೇಬಲ್ ಇಬ್ಬರು ಗ್ರಾಹಕರಿಗೂ ಹೊಡೆದಿದ್ದಾರೆ. ಈ ಇಡೀ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾನ್ಸ್ಟೇಬಲ್ ಕ್ಯಾಮರಾ ನೋಡಿದಾಗ ಕೋಣೆಯ ಬೆಳಕನ್ನು ಸ್ವಿಚ್ ಆಫ್ ಮಾಡಿದರು. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ದರೋಡೆ ಅಥವಾ ಇನ್ನಿತರ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲಾ ಹೊಟೇಲ್ ಗಳನ್ನು ತಡರಾತ್ರಿಯವರೆಗೆ ತೆರೆಯದಂತೆ ಇರಲು ಸೂಚನೆ ನೀಡಲಾಗಿತ್ತು. ಇದುವರೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
SCROLL FOR NEXT