ಬೆಂಗಳೂರು: ನಾಗರಿಕ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರಕ್ಕೆ ಸರ್ಕಾರ ಚಿಂತನೆ
ಸಾರ್ವಜನಿಕ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲು ಒಂದೇ ಸೂರಿನಡಿ ನಾಗರಿಕ ಮತ್ತು ....
ಬೆಂಗಳೂರು: ಸಾರ್ವಜನಿಕ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲು ಒಂದೇ ಸೂರಿನಡಿ ನಾಗರಿಕ ಮತ್ತು ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದ ದೂರು ಕೇಂದ್ರಗಳನ್ನು ತರಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ಇದರ ಭಾಗವಾಗಿ ಸಾಮಾನ್ಯ ಪೋರ್ಟಲ್, ನಾಲ್ಕು ಅಂಕೆಗಳ ದೂರು ಸಂಖ್ಯೆಯನ್ನು ಜನವರಿಯಲ್ಲಿ ಸಿದ್ದಪಡಿಸಲು ಸರ್ಕಾರ ಮುಂದಾಗಿದೆ. ಬಿಡಬ್ಲ್ಯುಎಸ್ಎಸ್ ಬಿ, ಬಿಬಿಎಂಪಿ, ಬೆಸ್ಕಾಂ ಮತ್ತು ಬಿಎಂಟಿಸಿಯ ದೂರು ಕೇಂದ್ರಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ.
ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗಿದ್ದು ಎಲ್ಲರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಚಂದ್ರ ಖುಂಟಿಯಾ ತಿಳಿಸಿದ್ದಾರೆ.
ಯಾವುದಾದರೂ ಸಮಸ್ಯೆಗಳಿಗೆ ಜನರಿಗೆ ಎಲ್ಲಿಗೆ ಹೋಗಬೇಕು, ಯಾರಿಗೆ ದೂರು ನೀಡಬೇಕು ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಒಂದು ಸಮಸ್ಯೆಗೆ ಹಲವು ಇಲಾಖೆಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.