ರಾಜ್ಯ

ಜೀವವೈವಿಧ್ಯ ಪಾರ್ಕ್ ಉದ್ಘಾಟನೆ ವೇಳೆ ಜೇನು ಹುಳಗಳ ದಾಳಿ: ಸಚಿವ ರಮಾನಾಥ ರೈ, ಇತರರಿಗೆ ಕಡಿತ

Sumana Upadhyaya
ಬೆಳಗಾವಿ: ಜೇನುಹುಳಗಳ ದಾಳಿಯಿಂದ ಜೀವವೈವಿಧ್ಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮಕ್ಕೆ ತೊಂದರೆಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದ್ದು, ಅರಣ್ಯ ಖಾತೆ ಸಚಿವ ಬಿ.ರಮಾನಾಥ ರೈ ಮತ್ತು ಇತರರ ಮೇಲೆ ದಾಳಿ ನಡೆದಿದೆ. ಇದರಿಂದ ಕಾರ್ಯಕ್ರಮಕ್ಕೆ ಸೇರಿದ ಜನರು ಭೀತಿಯಿಂದ ಚದುರಿಹೋದ ಘಟನೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ನಡೆದಿದೆ.
ಸಚಿವ ರಮಾನಾಥ ರೈ ಆಗತಾನೆ ಜೀವವೈವಿಧ್ಯ ಉದ್ಯಾನವನವನ್ನು ಉದ್ಘಾಟಿಸಿದ್ದರು. ಎರಡು ಡ್ರೋನ್ ಕ್ಯಾಮರಾಗಳು ಕಾರ್ಯಕ್ರಮದ ವಿಡಿಯೊ ಮಾಡುತ್ತಿದ್ದಾಗ ಸ್ವಾಗತ ಭಾಷಣ ನಡೆಯುತ್ತಿತ್ತು. ವೇದಿಕೆಯ ಪಕ್ಕದಲ್ಲಿ ಮರದಲ್ಲಿದ್ದ ಜೇನುಹುಳಗಳಿಗೆ ಡ್ರೋನ್ ಕ್ಯಾಮರಾದಿಂದ ತೊಂದರೆಯಾಗಿ ಅದು ಹಾರಲು ಆರಂಭಿಸಿತು. 
ಇದ್ದಕ್ಕಿದ್ದಂತೆ ಜೇನುಹುಳಗಳು ಸಚಿವ ರಮಾನಾಥ ರೈ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಕ ಕೃಷ್ಣ ಉಡುಪುಡಿ, ಅರಣ್ಯ ಇಲಾಖೆ ಉಪ ಸಂರಕ್ಷಕ ಬಿ.ವಿ.ಪಾಟೀಲ್ ಹಾಗೂ ಇತರರ ಮೇಲೆ ದಾಳಿ ನಡೆಸಿತು.
SCROLL FOR NEXT