ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಕ್ರಮ ಶೀಘ್ರದಲ್ಲಿ ಜಾರಿ: ರಾಮಲಿಂಗಾ ರೆಡ್ಡಿ

ನಗರ ಮುಖ್ಯ ಆಡಳಿತ, ವ್ಯವಹಾರ ಪ್ರದೇಶ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಶೀಘ್ರದಲ್ಲೇ ಮುಚ್ಚಿದ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮರಾಗಳ (ಸಿಸಿಟಿವಿ) ಕಣ್ಗಾವಲು ವ್ಯವಸ್ಥೆಗಳನ್ನು ಕಡ್ಡಾಯವಾಗಿ ...........

ಬೆಂಗಳೂರು: ನಗರ ಮುಖ್ಯ ಆಡಳಿತ, ವ್ಯವಹಾರ ಪ್ರದೇಶ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಶೀಘ್ರದಲ್ಲೇ ಮುಚ್ಚಿದ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮರಾಗಳ (ಸಿಸಿಟಿವಿ) ಕಣ್ಗಾವಲು ವ್ಯವಸ್ಥೆಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕಾಗುತ್ತದೆ, ನಗರದಲ್ಲಿ ಅಪರಾಧಗಳ ತಡೆಗೆ ನಗರಾಡಳಿತ ಈ ಕ್ರಮಕ್ಕೆ ಮುಂದಾಗಿದೆ. 
ದೆಹಲಿಯಾದ್ಯಂತ 1.4 ಲಕ್ಷ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದ ದೆಹಲಿ ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲಿ ಸಹ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ. ಕರ್ನಾಟಕ ಸಾರ್ವಜನಿಕ ಸುರಕ್ಷತೆ (ಕ್ರಮಗಳು) ಜಾರಿ  ಕಾಯ್ದೆಯನ್ನು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಇದರ ಅನುಸಾರ ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಧಾರ್ಮಿಕ ಸಂಕೀರ್ಣಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ತಾಣಗಲಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಲಿದೆ.
ಕಾಯ್ದೆ ಅನುಸಾರ ಕಳ್ಳತನ ಸೇರಿದಂತೆ, ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ವ್ಯಕ್ತಿಗಳ ದಾಖಲೆಯನ್ನು ಪಡೆಯಲು ಕಣ್ಗಾವಲು ವ್ಯವಸ್ಥೆ ಅಳವಡಿಕೆ ಅಗತ್ಯವಿದೆ, 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಗರದಲ್ಲಿ ಪ್ರಸ್ತುತ 5.4 ಲಕ್ಷ ಕ್ಯಾಮರಾಗಳು ಅಳವಡಿಕೆಯಾಗಿದೆ, ಇವುಗಳಲ್ಲಿ 2,000 ಕ್ಯಾಮರಾಗಳು ಸರ್ಕಾರಿ ಸ್ವಾಮ್ಯದ ಕಟ್ಟಡಗಳಲ್ಲಿ ಸ್ಥಾಪನೆಯಾಗಿದೆ. 
"ಸಿ.ಸಿ.ಟಿ.ವಿಗಳು ಇದ್ದರೆ, ಅಪರಾಧಿಗಳು ಅಪರಾಧವೆಸಗಲು ಭಯಪಡುತ್ತಾರೆ ಮತ್ತು ಇದು ಅಪರಾಧ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ಈ ಕ್ಯಾಮರಾಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಕಾರ್ಯಾಚರಿಸುತ್ತದೆ. ಈ ನಿರ್ಣಯ ಜಾರಿಗೆ ನಾವು ಮೂರು ತಿಂಗಳ ಸಮಯವನ್ನು ನೀಡುತ್ತಿದ್ದೇವೆ. ಅಷ್ಟರಲ್ಲಿ ಯಾರು ಸೂಚನೆಗಳನ್ನು ಪಾಲಿಸುವುದಿಲ್ಲವೋ ಅವರಿಗೆ ದಂಡ ವಿಧಿಸಲಾಗುವುದು" ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಎಕ್ಸ್ ಪ್ರೆಸ್ ಗೆ ತಿಳಿಸಿದರು
ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ವೀಡಿಯೋಗಳ ತುಣುಕನ್ನು ಸಂಗ್ರಹಿಸುವುದಲ್ಲದೆ ಪ್ರತ್ರಿ ಮೂರು ತಿಂಗಳಿಗೊಮ್ಮೆ ಸ್ಥಳೀಯ ಪೋಲೀಸ್ ಠಾಣೆಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು. ಯಾವುದೇ ಸಂಸ್ಥೆಯು ಈ ನಿಯಮಗಳನ್ನು ಅನುಸರಿಸದಿದ್ದರೆ ಮೊದಲ ಬಾರಿ `2,000 ಮತ್ತು ಎರಡನೇ ಬಾರಿಗೆ ` 4,000 ರೂ.ದಂಡವನ್ನು ಪಾವತಿಸಲಾಗುತ್ತದೆ.  ಮೂರು ತಿಂಗಳೊಳಗೆ ಸಿ.ಸಿ.ಟಿ.ವಿಗಳನ್ನು ಅಳವಡಿಸಲು ವಿಫಲರಾದವರು ಮೊದಲ ಬಾರಿಗೆ `5,000 ದಂಡವನ್ನು ತೆರಬೇಕಾಗುತ್ತದೆ,ಇನ್ನೂ ಪೋಲೀಸ್ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಅವರಿಗೆ ಹತ್ತು ಸಾವಿರ ರೂ. ದಂಡ ಹಾಕಲಾಗುತ್ತದೆ.
"ನಾವು 20 ಕೋಟಿ ರೂ.ಗಳನ್ನು ಸಂಪೂರ್ಣ ಯೋಜನೆಗಾಗಿ ನಿಗದಿಪಡಿಸಿದ್ದೇವೆ ಮತ್ತು ಪ್ರತಿ ವಾರ್ಡ್ ಗೆ ಈ ಯೋಜನೆಗೆ 10 ಲಕ್ಷ ರೂ. ನೀದಲಾಗುತ್ತದೆ ಈ ಕ್ಯಾಮೆರಾಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗೊತ್ತುಪಡಿಸುವ ಕಾರ್ಯದಲ್ಲಿ ಪೋಲೀಸರೊಡನೆ ನಾವೂ ಸೇರಿರುತ್ತೇವೆ." ಎಂದು ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಎಲ್ಲ ಪ್ರಯತ್ನಗಳನ್ನು ಸ್ವಾಗತಿಸಲಾಗುತ್ತದೆ': ಪುಟಿನ್ ಜೊತೆಗೆ ಪ್ರಧಾನಿ ಮೋದಿ ಮಾತುಕತೆ

SCO summit: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ, ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಸ್ತಾಪಿಸಿದ ಮೋದಿ

ರಷ್ಯಾದಿಂದ ತೈಲ ಖರೀದಿಸಿ 'Brahmins' ಶ್ರೀಮಂತರಾಗುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು: White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಗಾಜಾಪಟ್ಟಿಯಲ್ಲಿ Israel ಮತ್ತೊಂದು ಬೇಟೆ; Hamas ವಕ್ತಾರ Abu Obeida ಹೊಡೆದುರುಳಿಸಿದ IDF

ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಪಾಕಿಸ್ತಾನ ಪ್ರಧಾನಿ Shehbaz Sharif ಮುಜುಗರ; ಸೊಪ್ಪು ಹಾಕದ Putin, Xi Jinping! Video

SCROLL FOR NEXT