ಹಾಸನ: ಇಪ್ಪತ್ತು ಸಾವಿರಕ್ಕೆ ತನ್ನ ಮಗುವನ್ನೇ ಮಾರಾಟ ಮಾಡಿದ ತಾಯಿ!
ಬೇಲೂರು: ತಾಯಿಯೊಬ್ಬಳು ಇಪ್ಪತ್ತು ಸಾವಿರ ಹಣಕ್ಕಾಗಿ ತನ್ನ ಮಗುವನ್ನು ಮಾರಾಟ ಮಾಡಿದ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ.
ಮಗುವಿನ ತಾಯಿಯೇ ನಿವೃತ್ತ ದಾದಿ (ನರ್ಸ್) ಒಬ್ಬರ ಸಹಕಾರದಿಂದ ತನ್ನ ಮೂರು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿದ್ದಾಳೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದೀಗ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿದ್ದಾರೆ.
ಬೇಲೂರು ಪಟ್ಟಣದ ಮಂಜುಳಾ ಚಂದ್ರಶೇಖರ್ ಎನ್ನುವವರು ಈ ಮಗುವನ್ನು ಖರೀದಿಸಿದ್ದು ನರ್ಸ್ ಶಾಂತಮ್ಮ ಇದಕ್ಕೆ ನೆರವಾಗಿದ್ದರು. ಆದರೆ ಇಬ್ಬರ ಬಳಿಯೂ ಮಗುವಿನ ಕುರಿತ ಸೂಕ್ತ ದಾಖಲೆಗಳು ಇರಲಿಲ್ಲ. ಇದನ್ನು ಗಮನಿಸಿದ ಅಧಿಕಾರಿಗಳು ಮಗುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಮಗುವಿನ ಸ್ವಂತ ತಾಯಿ-ತಂದೆಯರು ಬಂದಲ್ಲಿ ಮಗುವನ್ನು ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.
ಮಂಜುಳಾ ಅವರು ಎಎಸ್‍ಐ ಒಬ್ಬರ ಪತ್ನಿಯಾಗಿದ್ದು ಮಗುವನ್ನು ಖರೀದಿಸಿರುವುದು ಇದೀಗ ಅನುಮಾನಕ್ಕೆ ಎಡೆಮಾಡಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿಯಮಗಳ ಪ್ರಕಾರ ಮಕ್ಕಳನ್ನು ಕಾನೂನು ರೀತಿಯಲ್ಲಿ ದತ್ತು ಪಡೆಯಲು ಅವಕಾಶಗಳಿದೆ. ಆದರೆ ಮಂಜುಳಾ ಹಾಗೆ ಮಾಡದೆ ಹಣ ತೆತ್ತು ಗಂಡು ಮಗುವನ್ನು ಖರೀದಿಸಿದ್ದು ಅಪರಾಧ ಎನ್ನಲಾಗಿದೆ.ೀ ಸಂಬಂಧ ಬೇಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಗು ಮಕ್ಕಳ ಕಲ್ಯಾಣ ಇಲಾಖೆ ವಶದಲ್ಲಿದೆ.