ಸಾಂದರ್ಭಿಕ ಚಿತ್ರ 
ರಾಜ್ಯ

ಮಕ್ಕಳ ಕಳ್ಳ ಸಾಗಣೆ: ರಾಜ್ಯದಲ್ಲಿ 1,680 ಪ್ರಕರಣಗಳು ದಾಖಲು, 5,577 ಮಂದಿ ಬಂಧನ

ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಕರ್ನಾಟಕದಲ್ಲಿ 2011-17ರ ನಡುವೆ 1,680 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಸಂಬಂಧ 5,577 ಆರೋಪಿಗಳನ್ನು ಬಂಧಿಸಿದೆ.

ಬೆಂಗಳೂರು: ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಕರ್ನಾಟಕದಲ್ಲಿ 2011-17ರ ನಡುವೆ 1,680 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಸಂಬಂಧ 5,577 ಆರೋಪಿಗಳನ್ನು ಬಂಧಿಸಿದೆ. ಸಿಐಡಿ ಪೋಲೀಸ್ ಅಧೀಕ್ಷಕಿ ಇಲಾಖಿ ಕರುಣಾಗರನ್ ಹೇಳಿದರು. ಮಕ್ಕಳ ಕಳ್ಳಸಾಗಣೆ ವಿರುದ್ಧ ಮಹಿಳಾ ದಕ್ಷತಾ ಸಮಿತಿಯವರು ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ವೇಳೆ 820 ಮಂದಿ ಅಪ್ರಾಪ್ತ ವಯಸ್ಕರು ಸೇರಿದಂತೆ 4,041 ಸಂತ್ರಸ್ತರನ್ನು ಇಲಾಖೆಯು ರಕ್ಷಿಸಿದೆ ಎಂಡು ಅವರು ಹೇಳಿದ್ದಾರೆ. ಇದರ ಸಂಬಂಧ ಮಕ್ಕಳ ಹಕ್ಕುಗಳ ಕಾಯಿದೆ  ಬಾಲ್ಯ ವಿವಾಹ ನಿಷೇಧ ಕಾಯಿದೆ, ಲೈಂಗಿಕ ಅಪರಾಧಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾಗಿವೆ, 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯಸ್ಥರಾದ ಉಮಾ ಮಹಾದೇವನ್ ಅವರು ಮಾತನಾಡಿ, ಓರ್ವ ಸರ್ಕಾರಿ ಅಧಿಕಾರಿಯಾಗಿ, ಅಗತ್ಯವಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು. ಇದೀಗ ಪತ್ತೆಯಾದ ಪ್ರಕರಣಗಳು ಕೇವಲ ಮೇಲ್ಪದರದವುಗಳಷ್ಟೆ.ಎಂದಉಮಾಅವರುತಮ್ಮಇಲಾಖೆಯಿಂದಮಹಿಳೆಯೊಬ್ಬರನ್ನುರಕ್ಷಿಸಿದ ಪ್ರಸಂಗವನ್ನು ಉದಾಹರಿಸಿ ಆಮಹಿಳೆಯ  ಜೀವನವು ಈಗ ಬದಲಾಗಿದೆ. ಆಕೆ ಸಂತಸವಾಗಿದ್ದಾರೆ ಎಂದರು.
ಉತ್ತರ ಪ್ರದೇಶದ ಸುಲ್ತಾನ್ ಪುರ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯನ್ನು ರಕ್ಷಿಸಿದ ಸಂಬಂಧ ಅವರು ಮಾತನಾಡಿದರು. ಆಕೆ ಮೂಲತಃ ವಿಜಯಪುರದವಳಾಗಿದ್ದು ಈಗ ಆಕೆ ಸಂತಸವಾಗಿದ್ದಾಳೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT