ಶ್..... ದೇವತೆ ಆರಾಧನೆ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಊರಿಗೆ ಊರೇ ಮೌನ!
ಗದಗ: ದೇವತೆಯ ಆರಾಧನೆ ಸಂದರ್ಭದಲ್ಲಿ ಹರಕೆ ಹೊತ್ತು ಒಬ್ಬರು ಅಥವಾ ಇಬ್ಬರು ಮೌನ ವ್ರತ ಮಾಡುವುತನ್ನು ನೋಡಿದ್ದೇವೆ. ಆದರೆ, ಈ ಗ್ರಾಮದಲ್ಲಿ ದೇವಿ ಜಾತ್ರೆ ಬಂತೆಂದರೆ ಸಾಕು ಅಂದು ಇಡೀ ಊರಿಗೆ ಊರೇ ಮೌನ ವ್ರತ ಮಾಡುತ್ತದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ವರ್ಷದಲ್ಲಿ ಒಂದು ದಿನ ಊರಲ್ಲಿರುವ ಎಲ್ಲಾ ಮನೆಗಳಿಗೆ ಬೀಗ ಹಾಕಿ ಜಾತ್ರೆ ಸಂದರ್ಭದಲ್ಲಿ ದೇವಿ ದರ್ಶನಕ್ಕೆ ಹೋಗುತ್ತಾರೆ.
ಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆ ಬಳಿಕ ಮಂಗಳವಾ, ಬುಧವಾರ 2 ದಿನ ಊರಿನ ಆಚೆ ಇರುವ ಎರಿಶಿಗೆಮ್ಮ ದೇವಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ಎರಿಶಿಗೆಮ್ಮ ಊರಿಂದ 5 ಕಿ.ಮೀ ದೂರದಲ್ಲಿದ್ದು, ಜಾತ್ರೆಗೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಹರಿದು ಬರುತ್ತಾರೆ.
ಜಾತ್ರೆ ಸಂದರ್ಭದಲ್ಲಿ ತಮ್ಮ ತಮ್ಮ ಮನೆಗಳಇಗೆ ಬೀಗ ಹಾಕುವ ಗ್ರಾಮಸ್ಥರು ದೇವಿ ದರ್ಶನಕ್ಕೆ ಹೋಗುದ್ದಾರೆ. ಸನ್ನಿಧಿಗೆ ಬರುವ ಭಕ್ತರು ಭಕ್ತಯಿಂದ ಏನನ್ನೇ ಬೇಡಿಕೊಂಡರು ಅವರ ಇಷ್ಟಾರ್ಥಗಳು ಈಡೇರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.
ದೇಗುಲದಲ್ಲಿಯೇ ನಾವು ಸಮಯವನ್ನು ಕಳೆಯುತ್ತೇವೆ. ಜಾತ್ರೆ ಸಂದರ್ಭದಲ್ಲಿ ಯಾರೊಬ್ಬರೂ ಮಾತನಾಡುವುದಿಲ್ಲ. ಮಕ್ಕಳು ಅಳುವುದಕ್ಕೆ ಆರಂಭಿಸಿದರೆ, ಪೋಷಕರು ಜನರಿಂದ ದೂರ ಕರೆದುಕೊಂಡು ಹೋಗುತ್ತಾರೆ. ಸಂಜೆ ವೇಳೆಗೆ ಮನೆಗೆ ಹಿಂದಿರುಗುತ್ತೇವೆ. ಜಾತ್ರೆಗೆ ತೆರಳಿದ ಬಳಿಕ ನಮ್ಮ ಮನೆಗಳನ್ನು ಗ್ರಾಮದ ದೇವತೆಯೇ ಕಾಯುತ್ತಾಳೆಂದು ನಂಬಿದ್ದೇವೆಂದು ಬಾಗಲಕೋಟೆ ಇಂಜಿನಿಯರಿಂಗ್ ವಿದ್ಯಾರ್ಥಿ, ಭಕ್ತ ಸಂದೀಪ್ ಬೂನಕೊಪ್ಪ ಅವರು ಹೇಳಿದ್ದಾರೆ.