ಸಾಂದರ್ಭಿಕ ಚಿತ್ರ 
ರಾಜ್ಯ

ಟಿವಿ ನೋಡುವುದನ್ನು ಪೋಷಕರು ನಿಯಂತ್ರಿಸಬೇಕು: ಮನೋವೈದ್ಯರು

ಪೋಷಕರು ಹೆಚ್ಚು ಕಾಲ ಟಿವಿ ಮುಂದೆ ಕಳೆಯುವುದನ್ನು ನಿಯಂತ್ರಿಸಿ ಮಕ್ಕಳೊಂದಿಗೆ ಕಳೆಯಬೇಕೆಂದು ಮನೋವೈದ್ಯರು ಸಲಹೆ ನೀಡಿದ್ದಾರೆ...

ಬೆಂಗಳೂರು: ಪೋಷಕರು ಹೆಚ್ಚು ಕಾಲ ಟಿವಿ ಮುಂದೆ ಕಳೆಯುವುದನ್ನು ನಿಯಂತ್ರಿಸಿ ಮಕ್ಕಳೊಂದಿಗೆ ಕಳೆಯಬೇಕೆಂದು ಮನೋವೈದ್ಯರು ಸಲಹೆ ನೀಡಿದ್ದಾರೆ. 
ದಾವಣಗೆರೆಯ ಹರಿಹರ ನಗರದ ನಿವಾಸಿಯಾಗಿರುವ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕನ್ನಡವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದನ್ನು ನೋಡುತ್ತಾ ನಿನ್ನೆಯಷ್ಟೇ ಬೆಂಕಿ ಹಚ್ಚಿಕೊಂಡು ನರ್ತಿಸುವ ಭರದಲ್ಲಿ ಬೆಂಕಿಗಾಹುತಿಯಾಗಿದ್ದಳು. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವವ ಮನೋವೈದ್ಯರು, ಸಾಮಾಜಿಕ ಕಲಿಕೆಯ ಸಿದ್ಧಾಂತ ಎಂಬುದು ವರ್ತನೆ, ನಡವಳಿಕೆ ಎಂಬುದು ಸಾಮಾಜಿಕ ನಡವಳಿಕೆಯ ಮಾದರಿಎಂಬ ಪ್ರಕ್ರಿಯೆಯ ಮೇಲೆ ನಿಂತಿರುತ್ತದೆ. ಒಬ್ಬ ವ್ಯಕ್ತಿ ಅಥವಾ ಮಕ್ಕಳು ಇತರರನ್ನು ನೋಡಿ ಕಲಿಯುತ್ತಿರುತ್ತಾರೆ. ಅಥವಾ ಮಾಧ್ಯಮಗಳು ಹಾಗೂ ಪರಿಸರದಿಂದ ಕಲಿಯುತ್ತಿರುತ್ತಾರೆಂದು ಹೇಳಿದ್ದಾರೆ. 
ಸಾಮಾಜಿಕ ಜಾಲತಾಣ ಹಾಗೂ ಇತರೆ ಮಾಧ್ಯಮಗಳ ಮುಂದೆ ಹೆಚ್ಚು ಕಾಲಾವಕಾಶವನ್ನು ಕಳೆಯುವುದು ವಾಸ್ತವಿಕ ಪ್ರಪಂಚದಿಂದ ದೂರಾಗುವಂತೆ ಮಾಡುತ್ತದೆ. ತಮ್ಮದೇ ಲೋಕದಲ್ಲಿರುವ ಅಂತಹ ವ್ಯಕ್ತಿ ಅಥವಾ ಮಕ್ಕಳನ್ನು ಅಲ್ಲಿಂದ ಹೊರತರುವುದು ಬಹಳ ಕಷ್ಟ ಎಂದು ತಿಳಿಸಿದ್ದಾರೆ. 
ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್ ಅವರು ಮಾತನಾಡಿ, ವಾಸ್ತವಿಕತೆಯಲ್ಲಿ ಮಕ್ಕಳು ಕಾಲ ಕಳೆಯಬೇಕೆಂದರೆ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಕಾಲ ಕಳೆಯಬೇಕು. ನೈಜತೆಯ ಸಮಯಗಳನ್ನು ಮಕ್ಕಳು ಸಂತಸದಿಂದ ಕಳೆಯುವಂತೆ ಮಾಡಬೇಕು. ಆಟದ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಮಕ್ಕಳು ಕಾಲ ಕಳೆಯುವಂತೆ ಮಾಡಬೇಕು. ಮಕ್ಕಳು ಒಂದು ವೇಳೆ ಇದನ್ನು ಇಷ್ಟ ಪಡದೇ ಹೋದರೆ, ಅವರಿಗೆ ಇಷ್ಟವಾಗುವ ಕಥೆ ಹೇಳುವುದು, ಡ್ರಾಯಿಂಗ್ ಬರೆಯುವುದು ಹಾಗೂ ಇತರೆ ಸ್ಫೂರ್ತಿ ನೀಡುವ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕೆಂದು ತಿಳಿಸಿದ್ದಾರೆ. 
ಪೀಪಲ್ ಟ್ರೀ ಆಸ್ಪತ್ರೆಯ ಮನೋವೈದ್ಯ ಡಾ.ಸತೀಶ್ ರಾಮಯ್ಯ ಅವರು ಮಾತನಾಡಿ, ಅರಿವಿನ ಬೆಳವಣಿಗೆಗಿಂತ ಹೆಚ್ಚಾಗಿ ಮಕ್ಕಳು ತಮ್ಮ ಇತರರನ್ನು ನೋಡಿ ಕಲಿಯುತ್ತಾರೆ. ಶಿಕ್ಷಣ, ಬುದ್ಧಿವಾದ ಹೇಳುವ ಮೂಲಕವಷ್ಟೇ ಇಂತಹವುಗಳಿಂದ ಮಕ್ಕಳನ್ನು ದೂರವಿಡಬಹುದು ಎಂದಿದ್ದಾರೆ. 
ಪೀಪರ್ ಟ್ರೀ ಆಸ್ಪತ್ರೆಯ ಡಾ. ದಿವ್ಯ ನಲ್ಲೂರು ಮಾತನಾಡಿ, ಭಾವನೆಗಳೊಂದಿಗೆ ಇರವುದರ ಕುರಿತಂತೆ ಮಕ್ಕಳು ಕಲಿಯುತ್ತಿರುತ್ತಾರೆ. ಇಂತಹ ವಯಸ್ಸಿನಲ್ಲಿ ಮಕ್ಕಳು ನಾವು ಹೇಳಿದ್ದಕ್ಕೆ ವಿರುದ್ಧವಾಗಿ ಮಾಡುತ್ತಾರೆ. ಅವರಿಗೆ ಅನಿಸಿದ್ದರನ್ನು ಅವರು ಮಾಡುತ್ತಿರುತ್ತಾರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT