ಬೆಂಗಳೂರಿನ ಮಾರುಕಟ್ಟೆಯೊಂದರಲ್ಲಿ ಮಹಿಳೆಯೊಬ್ಬರು ಈರುಳ್ಳಿಯನ್ನು ಪ್ರತ್ಯೇಕಿಸುತ್ತಿರುವುದು
ಬೆಂಗಳೂರು:ಈರುಳ್ಳಿ ಬೆಲೆಯೇರಿಕೆ ಹೊಟೇಲ್ ಮಾಲಿಕರಿಗೆ ತಲೆನೋವಾಗಿದೆ. ಜಿಎಸ್ ಟಿ ದರದಲ್ಲಿ ಇಳಿಕೆಯಿಂದ ತೆರಿಗೆ ಇಳಿಕೆ ಮಾಡಿ ಈಗಾಗಲೇ ಪರದಾಡುತ್ತಿರುವ ಹೊಟೇಲ್ ಗಳು ಇದೀಗ ಈರುಳ್ಳಿ ಬೆಲೆಯೇರಿಕೆಯಿಂದ ಪದಾರ್ಥಗಳ ತಯಾರಿಕೆ ಮೇಲೆ ಪರಿಣಾಮ ಬೀರಿದೆ.
ಎರಡು ತಿಂಗಳ ಹಿಂದೆ ಪ್ರತಿ ಕೆಜಿಗೆ 36 ರೂಪಾಯಿ ಇದ್ದ ಈರುಳ್ಳಿ ಬೆಲೆ ಇಗೀಗ 67 ರೂಪಾಯಿಯಾಗಿದೆ. ಈ ಬೆಲೆ ಮುಂದಿನ 15-20 ದಿನಗಳವರೆಗೆ ಮುಂದುವರಿಯಲಿದ್ದು ಪೂರೈಕೆ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 75 ರೂಪಾಯಿಗಳಿವೆ. ಭಾರತೀಯರಲ್ಲಿ ಬಹುತೇಕ ಮಂದಿ ಹಲವು ಪದಾರ್ಥಗಳಿಗೆ ಈರುಳ್ಳಿಯನ್ನು ನೆಚ್ಚಿಕೊಂಡಿರುತ್ತಾರೆ. ಈರುಳ್ಳಿ ಬೆಲೆಯೇರಿಕೆಯಿಂದ ಗ್ರಾಹಕರು ಅನಿವಾರ್ಯವಾಗಿ ಕಡಿಮೆ ಬಳುಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ನಮಗೆ ದಿನನಿತ್ಯ ಪದಾರ್ಥ ಮಾಡಲು 4ರಿಂದ 5 ಈರುಳ್ಳಿ ಬೇಕಾಗುತ್ತಿತ್ತು. ಆದರೆ ಈಗ ಕೇವಲ 2 ಈರುಳ್ಳಿ ಹಾಕಿ ಪದಾರ್ಥ ಮಾಡಿ ಮುಗಿಸುತ್ತೇವೆ ಎನ್ನುತ್ತಾರೆ ಸಿ.ವಿ.ರಾಮನ್ ನಗರ ನಿವಾಸಿ ನೀತು ಅರುಣ್.
ಈರುಳ್ಳಿ ಬೆಲೆಯೇರಿಕೆ ಸಗಟು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಏಕೆಂದರೆ ಹೊಟೇಲುಗಳು ಹೆಚ್ಚಾಗಿ ಅವಲಂಬಿತವಾಗಿರುವುದು ಸಗಟು ಮಾರುಕಟ್ಟೆ ಮೇಲೆ. ಸಗಟು ಮಾರುಕಟ್ಟೆಯಲ್ಲಿ ಕೂಡ ಬೆಲೆ ದುಪ್ಪಟ್ಟಾಗಿದೆ. ಇದು ನಮ್ಮ ಗಳಿಕೆ ಮೇಲೆ ಪರಿಣಾಮ ಬೀರಿದೆ ಎಂದು ಕಮನಹಳ್ಳಿ ಸಂಗಮ ಹೊಟೇಲ್ ಮಾಲಿಕ ಸಂತೋಷ್.ಎನ್ ಹೇಳುತ್ತಾರೆ.
ಇದೇ ಬೆಲೆ ಇನ್ನು ಕೆಲ ಸಮಯಗಳವರೆಗೆ ಮುಂದುವರಿದರೆ ಆಹಾರಗಳ ಬೆಲೆ ಹೆಚ್ಚಿಸುವ ಕುರಿತು ಕೂಡ ಹೊಟೇಲ್ ಮಾಲಿಕರು ಯೋಚಿಸುತ್ತಿದ್ದಾರೆ. ನಾವು ಸಾಮಾನ್ಯವಾಗಿ ತರಕಾರಿಗಳ ಬೆಲೆ ಹೆಚ್ಚು ಕಡಿಮೆಯಾದಾಗ ಬೆಲೆ ಹೆಚ್ಚಿಸುವುದಿಲ್ಲ. ಆದರೆ ಈ ಬಾರಿ ಇದೇ ಪರಿಸ್ಥಿತಿ ಮುಂದುವರಿದರೆ ನಮಗೆ ಬೇರೆ ಮಾರ್ಗವಿಲ್ಲ ಎನ್ನುತ್ತಾರೆ ವಿಜಯನಗರದ ಹೊಟೇಲ್ ನ ಮಾಲಿಕರೊಬ್ಬರು.
ಹಾಪ್ ಕಾಮ್ಸ್ ನ ಪ್ರಕಾರ, ಈರುಳ್ಳಿ ರಫ್ತು ಏರಿಕೆಯಾದ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಹಾಪ್ ಕಾಮ್ಸ್ ನಲ್ಲಿ. ಆದರೆ ಕಳೆದ ಕೆಲ ತಿಂಗಳು ದಕ್ಷಿಣ ಭಾರತದಲ್ಲಿ ಮಳೆ ಹೆಚ್ಚಾದ ಕಾರಣ ಬೆಲೆ ಹೆಚ್ಚಳವಾಗಿದೆ ಚಿಲ್ಲರೆ ಮಾರಾಟಗಾರರು.
ಬೆಂಗಳೂರಿಗೆ ಸಾಮಾನ್ಯವಾಗಿ ಧಾರವಾಡ, ತಮಿಳುನಾಡುಗಳಿಂದ ಈರುಳ್ಳಿ ಬರುತ್ತದೆ. ಆದರೆ ತಮಿಳುನಾಡಿನಲ್ಲಿ ಪ್ರತಿ ಕೆಜಿಗೆ 100 ರೂಪಾಯಿಯಾಗಿರುವುದರಿಂದ ಬೆಂಗಳೂರಿನಲ್ಲಿ ಕೂಡ ಈರುಳ್ಳಿ ಬೆಲೆ ಹೆಚ್ಚಾಗಿದೆ.
ತರಕಾರಿ, ರೇಷನ್ ವಸ್ತುಗಳ ಬೆಲೆ ಹೆಚ್ಚಾದಾಗ ಹೊಟೇಲ್ ಗಳ ತಿಂಡಿ, ತಿನಿಸುಗಳ ಬೆಲೆ ಹೆಚ್ಚಿಸುವುದು ಸುಲಭದ ವಿಷಯವಲ್ಲ. ಈಗಾಗಲೇ ತೆರಿಗೆ ಹೆಚ್ಚಳ ಮಾಡಿ ಜನರಿಂದ ಟೀಕೆಗಳು ಕೇಳಿಬರುತ್ತಿವೆ. ಇನ್ನು 15 ದಿನಗಳಲ್ಲಿ ತರಕಾರಿ ಬೆಲೆ ಕಡಿಮೆಯಾಗಬಹುದು ಎಂಬ ಆಶಾವಾದವಿದೆ ಎನ್ನುತ್ತಾರೆ ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್.
ಬೆಲೆಯೇರಿಕೆಯ ಲಾಭವನ್ನು ಮಧ್ಯವರ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬೇಕೆಂದೇ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಂಡು ಹೆಚ್ಚಿನ ಬೆಲೆ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos