ಪ್ರಕಾಶ್ ರೈಮತ್ತು ಪ್ರತಾಪ್ ಸಿಂಹ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡಿದ ನಟ ಪ್ರಕಾಶ್ ರೈ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, ಸಿನಿಮಾಗಳಲ್ಲಿ ಖಳನಟನ ಪಾತ್ರ ಮಾಡ್ತಿರಾ, ನಿಜ ಜೀವನದಲ್ಲು ಅದೆ ರೀತಿ ಆಗ್ಬೇಡಿ. ಇನ್ಮುಂದೆ ಪ್ರಧಾನಿ ಬಗ್ಗೆ ಬೀದಿಯಲ್ಲಿ ಹೇಳಿಕೆ ಕೊಟ್ಟರೆ ಅಂತಹ ಜಾಗದಲ್ಲೇ ಬಂದು ಅದೇ ರೀತಿಯ ಉತ್ತರ ಕೊಡಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.
ನೀವು ನಟರಿರಬಹುದು, ನಿಮಗೂ ವಿವೇಚನೆ ಇದೆ ಎನ್ನುವುದನ್ನು ಮರೆಯಬೇಡಿ. ನಿಮಗೆ ಗೌರಿ ಲಂಕೇಶ್ ಹತ್ಯೆ ಮಾತ್ರ ಕಾಣಿಸುತ್ತಿದೆ, ಅದರೆ ಬಿಜೆಪಿ ಕಾರ್ಯಕರ್ತರ ಕೊಲೆ ಕಾಣಿಸುತ್ತಿಲ್ಲವೇ ? ಕೊಲೆ ಆದವರದ್ದು ಜೀವವೇ ಅಲ್ಲವೇ? ಗೌರಿ ಹತ್ಯೆ ಕೆಲವರು ಸಂಭ್ರಮಿಸುತ್ತಿದ್ದಾರೆ ಅಂತ ನೀವು ಪ್ರಶ್ನೆ ಮಾಡ್ತೀರಾ, ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡುವ ಬದಲು ಮೋದಿಯವರನ್ನ ಎಂದು ಹೇಳಿದ್ದಾರೆ.
ಕಾವೇರಿ ಬಗ್ಗೆ ಕೇಳಿದ್ರೆ ನಟ ಅಂತೀರಿ. ರಾಜ್ಯದಲ್ಲಿ ಕಾವೇರಿ ಬಗ್ಗೆ ಸಮಸ್ಯೆ ಆದ್ರೆ ಸುಮ್ಮನಿರುತ್ತೀರಿ. ತಮಿಳುನಾಡಿನಲ್ಲಿ ಪ್ರಕಾಶ್ ರಾಜ್ ಆದರೆ ಕರ್ನಾಟಕದಲ್ಲಿ ಪ್ರಕಾಶ್ ರೈ ಆಗ್ತಿರಾ. ಹೆಸರು ಬದಲಾಯಿಸಿಕೊಂಡಂತೆ ನಿಮ್ಮ ನಿಲುವುಗಳನ್ನ ಬದಲಾಯಿಸಿಕೊಳ್ಳುತ್ತೀರಾ ಎಂದು ಕಿಡಿ ಕಾರಿದ್ದಾರೆ.