ಜೈಲಿನ ಹೊರಗೆ ಕಾಯುತ್ತಿರುವ ಶಶಿಕಲಾ ಸಂಬಂಧಿಕರು 
ರಾಜ್ಯ

ಶಶಿಕಲಾ ಪೆರೋಲ್ ಪ್ರಕ್ರಿಯೆ: ಕಾದು ಕಾದು ಸುಸ್ತಾದ ಜೈಲಿನ ಬೇರೆ ಕೈದಿಗಳ ಸಂಬಂಧಿಕರು!

ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ ಅವರಿಗೆ 5 ದಿನಗಳ ಪೆರೋಲ್ ಸಿಕ್ಕಿದ ಹಿನ್ನೆಲೆಯಲ್ಲಿ, ಅವರನ್ನು ಭೇಟಿ ಮಾಡಲು ಶಶಿಕಲಾ ಸಂಬಂಧಿಕರು ಮತ್ತು ...

ಬೆಂಗಳೂರು: ಎಐಎಡಿಎಂಕೆ ನಾಯಕಿ  ವಿ.ಕೆ ಶಶಿಕಲಾ ಅವರಿಗೆ 5 ದಿನಗಳ ಪೆರೋಲ್ ಸಿಕ್ಕಿದ ಹಿನ್ನೆಲೆಯಲ್ಲಿ, ಅವರನ್ನು ಭೇಟಿ ಮಾಡಲು ಶಶಿಕಲಾ ಸಂಬಂಧಿಕರು ಮತ್ತು ಆಪ್ತರು ಜೈಲಿನ ಹೊರಗಡೆ ಸುಮಾರು ಗಂಟೆಗಳ ಕಾಲ ಕಾದರು.
ಜೈಲು ಅಧಿಕಾರಿಗಳು ಪೆರೋಲ್ ಅರ್ಜಿ ಪ್ರಕ್ರಿಯೆ ಪರಿಶೀಲನೆಯಲ್ಲಿ ನಿರತರಾಗಿದ್ದರು. ತಮಿಳುನಾಡಿನಿಂದ ಬೆಳಗ್ಗೆ 11 ಗಂಟೆಗೆ ಆಗಮಿಸಿದ್ದ ಸಂಬಂಧಿಕರು ಹಾಗೂ ಆಪ್ತರು, ಮಧ್ಯಾಹ್ನ 3 ಗಂಟೆ ವರೆಗೆ ಕಾದು ಕಾದು ಸುಸ್ತಾದರು, ಆಂತಿಮವಾಗಿ ಶಶಿಕಲಾ 3 ಗಂಟೆ ನಂತರ ಜೈಲಿನಿಂದ ಹೊರ ಬಂದರು.
ಮಾಗಡಿ, ಬಿಟಿಎಂ ಲೇಔಟ್ ಸೇರಿದಂತೆ ಹಲವು ಸ್ಥಳಗಳಿಂದ ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡು ಆಗಮಿಸಿದ್ದ  ಸಂಬಂಧಿಕರು ಕೂಡ 3 ಗಂಟೆವರೆಗೆ ಕಾದರು. 
ಮಾಗಡಿಯಿಂದ ಬಂದಿದ್ದ ಫಾತಿಮಾ, ನಾನು ಯಾವಾಗ ಬಂದರೂ ನನ್ನ ಪತಿಯನ್ನು ಮಧ್ಯಾಹ್ನ 12 ಗಂಟೆಯೊಳಗೆ ಭೇಟಿ ಮಾಡುತ್ತಿದ್ದೆ, ಆದರೆ ಇಂದು ಶಶಿಕಲಾ ಪೆರೋಲ್ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಮದ್ಯಾಹ್ನ 3 ಗಂಟೆವರೆಗೆ ಕಾಯಲು ಹೇಳಿದರು. ಹಲವು ಮಂದಿ ಜೈಲಿನ ಹೊರಗೆ ಕಾಯುತ್ತಿದ್ದು, ಊಟ ಕೂಡ ಮಾಡಲಿಲ್ಲ ಎಂದು ತಿಳಿಸಿದರು, 
ಪೆರೋಲ್ ಮೇಲೆ ಹೊರಬಂದಿರುವ ಶಶಿಕಲಾ ರಸ್ತೆ ಮುಖಾಂತರ ಚೆನ್ನೈ ತಲುಪಿದರು. ಟಿ ನಗರದಲ್ಲಿರುವ ತನ್ನ ನಾದಿನಿ ಇಳವರಸಿ ಪುತ್ರಿ ವಿಷ್ಣು ಪ್ರಿಯಾ ಮನೆಗೆ ಆಗಮಿಸಿದ ಶಶಿಕಲಾ ಮುಂದಿನ 5 ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ, ತಮ್ಮ ಪತಿ ನಟರಾಜನ್ ದಾಖಲಾಗಿರುವ ಆಸ್ಪತ್ರೆಗೆ ಅಲ್ಲಿಂದಲೇ ತೆರಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT