ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು ಮಳೆ: ಸರಿಸೃಪಗಳ ರಕ್ಷಣೆಗಿದೆ ಬಿಬಿಎಂಪಿ ವನ್ಯಜೀವಿ ರಕ್ಷಣಾ ತಂಡ

ಬೆಂಗಳೂರಿನ ಜನರು ಪ್ರತಿ ಬಾರಿ ಮಳೆಯಿಂದಾಗಿ ಪ್ರವಾಹ ಮತ್ತು ಸಂಚಾರ ದಟ್ಟಣೆ ಅನುಭವಿಸುತ್ತಾರೆ.

ಬೆಂಗಳೂರು: ಬೆಂಗಳೂರಿನ ಜನರು ಪ್ರತಿ ಬಾರಿ ಮಳೆಯಿಂದಾಗಿ ಪ್ರವಾಹ ಮತ್ತು ಸಂಚಾರ ದಟ್ಟಣೆ ಅನುಭವಿಸುತ್ತಾರೆ. ಆದರೆ ಇನ್ನೊಂದಷ್ಟು ಸಹೃದಯಿ ಜನರು ಮಳೆ ಸುಳಿಗಾಳಿಗಳಲ್ಲಿ ಸಿಕ್ಕಿಬಿದ್ದ ಸರಿಸೃಪಗಳನ್ನು, ಪಕ್ಷಿಗಳನ್ನು ಉಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಬಿಬಿಎಂಪಿ ವನ್ಯಜೀವಿ ರಕ್ಷಣಾ ತಂಡ ದಿನಕ್ಕೆ 50 ಹಾವುಗಳನ್ನು ರಕ್ಷಿಸಿದೆ.
"ಬಿಬಿಎಂಪಿ ವನ್ಯಜೀವಿ ರಕ್ಷಣಾ ವಿಭಾಗದಲ್ಲಿ 22 ಸ್ವಯಂಸೇವಕರು ಇದ್ದಾರೆ ಮತ್ತು ಅವರಲ್ಲಿ ಪ್ರತಿಯೊಬ್ಬರೂ ಸುಮಾರು 15 ಕರೆಗಳನ್ನು ಸ್ವೀಕರಿಸುತ್ತಾರೆ. ಒಟ್ಟಾರೆ ದಿನಕ್ಕೆ ಸುಮಾರು 300 ಕರೆಗಳನ್ನು ಸ್ವೀಕರಿಸುತ್ತೇವೆ. ನಮ್ಮ ಸ್ವಯಂಸೇವಕರು ರಕ್ಷಿಸುವ ಹಾವುಗಳನ್ನು ಮಾನವ ವಾಸಸ್ಥಾನದಿಂದ ದೂರದ ಸುರಕ್ಷಿತ ಸ್ಥಳಗಳಲ್ಲಿ ಬಿಡುತ್ತಾರೆ," ತಂಡದಲ್ಲಿ ಕೆಲಸ ಮಾಡುವ ಶರತ್ ಬಾಬು, ಹೇಳಿದರು. ನಗರದಲ್ಲಿ ಭಾರೀ ಮಳೆಯಾದ ದಿನ ವನ್ಯಜೀವಿ ರಕ್ಷಕರಿಗೆ ಹೆಚ್ಚು ಕರೆ ಬರುತ್ತವೆ ಎನ್ನಲಾಗಿದೆ.
ರಕ್ಷಿಸಿದ ಹಾವುಗಳಲ್ಲಿ ನಾನಾ ವಿಧಗಳಿದ್ದು ನಾಗರ ಹಾವು, ಇಲಿ ಹಾವುಗಳು, ಕುಕ್ರಿ ಹಾವುಗಳು, ಕ್ರೈಟ್ಗಳು ಮತ್ತು ಟ್ರಿಂಕ್ಟ್ ಹಾವುಗಳು ಇವೆ. ಹೊರಗಿನ ಪ್ರದೇಶಗಳಿಂದ ಬಂದ ಇವು ನಗರದ ಕೇಂದ್ರ ಭಾಗದಲ್ಲಿ ಕೆರೆಗಳಲ್ಲಿ ಆಶ್ರಯ ಪಡೆಯುತ್ತವೆ.  ಕಸದ ರಾಶಿಯ ಕಾರಣದಿಂದಾಗಿ, ಇಲಿಗಳಂತಹಾ ಪ್ರಾಣಿ ಸಂತತಿ ಹೇರಳವಾಗುತ್ತದೆ. ಇದು ಹಾವುಗಳನ್ನು ಆಕರ್ಷಿಸುತ್ತದೆ. 
"ನಮ್ಮ ತಂಡ ರಾಜ ಭವನ, ವಿಧಾನ ಸೌಧ ಮತ್ತು ಹೈಕೋರ್ಟ್ ಕಟ್ಟಡದಿಂದ ಹಾವುಗಳನ್ನು ರಕ್ಷಿಸಿದೆ" ಎಂದು ಶರತ್ ಬಾಬು ಹೇಳಿದರು. ಸ್ವಯಂಸೇವಕರು ಪಕ್ಷಿಗಳು, ಕಾಗೆಗಳು ಮತ್ತು ಅಳಿಲುಗಳನ್ನು ಸಹ ರಕ್ಷಿಸುತ್ತಾರೆ. ಹೊರಾಮಾವು, ಕೆಂಗೇರಿ ಮತ್ತು ಬನ್ನೇರುಘಟ್ಟ್ನಲ್ಲಿ ಎನ್ ಜಿಓ ಗಳು ನಡೆಸುವ ರಕ್ಷಣಾ ಕೇಂದ್ರಗಳಲ್ಲಿ ಅವುಗಳನ್ನು ಬಿಟ್ಟು ಬರಲಾಗುತ್ತದೆ.
ವನ್ಯಜೀವಿ ರಕ್ಷಕ ನಾಗಗುಷನ್, "ಸಾಮಾನ್ಯವಾಗಿ, ಹಾವುಗಳು, ಮ್ಯಾನ್ ಹೋಲ್ ಗಳು, ಬೊರೊಗಳು ಮತ್ತು ಇಳಿಜಾರು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ" ಎಂದು ಹೇಳಿದರು.
"ಮಾನ್ಸೂನ್ ಸಮಯದಲ್ಲಿ, ಅತಿಯಾದ ನೀರು ಹರಿಯುವಾಗ, ಹಾವುಗಳು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತವೆ ನಗರದಲ್ಲಿ ಹೆಚ್ಚಿನ ಹಾವುಗಳು ವಿಷಯುಕ್ತ ಹಾವುಗಳಾಗಿರುವುದಿಲ್ಲ. ಜನರು ಮನೆಯಲ್ಲಿ ಹಾವು ಕಾಣಿಸಿದರೆ ಸಹಾಯಕ್ಕಾಗಿ ಬಿಬಿಎಂಪಿ ನಿಯಂತ್ರಣ ಕೊಠಡಿ ಗೆ ಕರೆ ಮಾಡಬಹುದು. ರಸ್ತೆಗಳಲ್ಲಿ ವಿಷವಿಲ್ಲದ ಹಾವುಗಳು ಕಂಡುಬಂದರೆ, ಹೆಚ್ಚು ಗಮನನೀದಬೇಕಾಗಿಲ್ಲ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT