ಬಿಳಿ ಹುಲಿ ದಾಳಿ(ಸಂಗ್ರಹ ಚಿತ್ರ) 
ರಾಜ್ಯ

ಬನ್ನೇರುಘಟ್ಟ: ಬಿಳಿ ಹುಲಿಗೆ ಆಹಾರ ನೀಡಲು ತೆರಳಿದ್ದವರೆ ಹುಲಿಗೆ ಆಹಾರವಾದ್ರು!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ನೌಕರನೇ ಹುಲಿಗಳಿಗೆ ಆಹಾರವಾಗಿರುವ ದಾರುಣ...

ಬನ್ನೇರುಘಟ್ಟ(ಆನೇಕಲ್): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ನೌಕರನೇ ಹುಲಿಗಳಿಗೆ ಆಹಾರವಾಗಿರುವ ದಾರುಣ ಘಟನೆ ನಡೆದಿದೆ. 
ಬಿಳಿ ಹುಲಿಗಳಿಗೆ 45 ವರ್ಷದ ಗೇಟ್ ಕೀಪರ್ ಆಂಜನೇಯ ಎಂಬುವರು ನಿನ್ನೆ ಸಂಜೆ 5.30ರ ಸುಮಾರಿಗೆ ಆಹಾರ ನೀಡಿದ್ದರು. ಮತ್ತೊಮ್ಮೆ ಆಹಾರ ಪರೀಕ್ಷಿಸಲು ಆವರಣಕ್ಕೆ ಪ್ರವೇಶಿಸಿದಾಗ ಒಂದು ವರ್ಷದ ಎರಡು ಮರಿ ಹುಲಿಗಳು ಅವರ ಮೇಲೆ ದಾಳಿ ಮಾಡಿದೆ. 
ಮರಿ ಹುಲಿಗಳ ದಾಳಿಯಿಂದ ಕುಸಿದು ಬಿದ್ದ ಆಂಜನೇಯ ಮೇಲೆ ದೊಡ್ಡ ಹುಲಿಗಳು ದಾಳಿ ನಡೆಸಿವೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 
ಆಂಜನೇಯ ಅವರು ಉದ್ಯಾನದ ಸಮೀಪದಲ್ಲಿರುವ ಹಕ್ಕಿಪಿಕ್ಕಿ ಕಾಲನಿಯವರು. ಬೇರೆಡೆ ನಿಯೋಜನೆಗೊಂಡಿದ್ದ ಇವರನ್ನು ಅಕ್ಟೋಬರ್ 1ರಿಂದ ಬಿಳಿ ಹುಲಿ ಸಫಾರಿ ಸ್ಥಳದಲ್ಲಿ ಗೇಟ್ ಕೀಪರ್ ಆಗಿ ನೇಮಕ ಮಾಡಲಾಗಿತ್ತು. ಹುಲಿ ನೋಡಿಕೊಳ್ಳಲು ನುರಿತ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. ಆದರೆ ಆಂಜನೇಯ ಅವರಿಗೆ ಈ ಅನುಭವ ಇರಲಿಲ್ಲ ಇದೇ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!