ರಾಜ್ಯ

ಜಮ್ಮು ಕಾಶ್ಮೀರದಲ್ಲಿ ಕನ್ನಡಿಗ ಯೋಧನ ಆತ್ಮಹತ್ಯೆ; ನಂಬಲಾಗದು ಎಂದ ಪೋಷಕರು

Raghavendra Adiga
ಬೆಂಗಳೂರು: ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರು ಮೂಲದ ಯೋಧ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿ ಯೋಧನ ತಂದೆ ಸೇನೆ ವಿರುದ್ಧ ಹರಿಹಾಯ್ದಿದ್ದಾರೆ.
"ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಲಾಗುತ್ತಿಲ್ಲ." ನರೇಂದ್ರ ತಾಯಿ ಪುಷ್ಪ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. "ನರೇಂದ್ರ ಭಾನುವಾರ ಸಂಜೆ ವೀಡಿಯೊ ಕರೆ ಮಾಡಿದ್ದನು ಆಗ ಎಂದಿನಂತೆ ಮಾತನಾಡಿದ್ದಾನೆ, ಅವನು ಯಾವುದೇ ಸಮಸ್ಯೆಗಳ ಬಗ್ಗೆ ಸುಳಿವು ನೀಡಿರಲಿಲ್ಲ. ನನ್ನ ಮಗ ಖಿನ್ನತೆಗೆ ಒಳಗಾಗಲಿಲ್ಲ," ಎಂದು ಅವರು ಹೇಳಿದರು.
"ನನ್ನ ಮಗ ಆತ್ಮಹತ್ಯೆ ಮಾಡಿಕೊಂಡರೆ ಸೈನ್ಯದ ಅಧಿಕಾರಿಗಳು ನಮಗೆ ಸಾಕ್ಷ್ಯವನ್ನು ತೋರಿಸಬೇಕು, ನನ್ನ ಮಗನ ಸಾವಿನ ಬಗ್ಗೆ ನಿಕರ ಕಾರಣ ಕಂಡುಹಿಡಿಯಲು ನಾವು ಕಾನೂನು ನೆರವು ಪಡೆಯುತ್ತೇವೆ" ಎಂದು ಪುಷ್ಪಾ ಹೇಳಿದ್ದಾರೆ.
ಬೆಂಗಳೂರಿನ ರಾಜಗೋಪಾಲನಗರ ನಿವಾಸಿ ನರೇಂದ್ರ ಆರ್ ಎರಡು ವರ್ಷಗಳ ಹಿಂದೆ ಸೈನ್ಯಕ್ಕೆ ಸೇರಿದ್ದನು.. ನಿನ್ನೆ ರಾತ್ರಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯೋಧನ ಸಾವಿನ ಕುರಿತು ಸೇನೆಯ ಹಿರಿಯ ಅಧಿಕಾರಿಗಳು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 
ಅಂತಿಮ ವಿಧಿ ವಿಧಾನಕ್ಕಾಗಿ ಮಂಗಳವಾರದಂದು ಯೋಧನ ಪಾರ್ಥಿವ ಶರೀರವನ್ನು ನಗರಕ್ಕೆ ತರಲಾಗುತ್ತದೆ.
SCROLL FOR NEXT