ರಸ್ತೆ ಪರಿಶೀಲನೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನಗರದ ರಸ್ತೆ ಗುಂಡಿಗಳಿಗೆ ಮೂವರು ಬಲಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಾಯಂಡಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟೆಯ ನಂತರ ಸಿಎಂ ಸಭೆ ನಡೆಸಿದರು.
ಕಳೆದ 55 ದಿನಗಳಲ್ಲಿ 42 ದಿನ ನಗರದಲ್ಲಿ ಭಾರೀ ಮಳೆಯಾಗಿದೆ, ಇದು ಸಹಜ ಮಳೆಗಿಂತ ಮೂರು ಪಟ್ಟು ಹೆಚ್ಚು ಸುರಿದಿದೆ. ಸತವವಾಗಿ ಮಳೆ ಬೀಳುತ್ತಿರುವುದರಿಂದ, ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಲು ಕಾರಣವಾಗಿದೆ, ಬಿಬಿಎಂಪಿ ಗುಂಡಿಗಳನ್ನು ಮುಚ್ಚುತ್ತಿದೆ, ಆದರೆ ಮಳೆಯಿಂದಾಗಿ ಮುಚ್ತಿರುವ ಗುಂಡಿಗಳು ಮತ್ತೆ ತೆರೆಯುತ್ತಿವೆ,.
ಹೀಗಾಗಿ ಬಿಬಿಎಂಪಿ ಎಂಜಿನೀಯರ್ ಗಳಿಗೆ 15 ದಿನಗಳಲ್ಲಿ ಗುಂಡಿ ಮುಚ್ಚುವಂತೆ ಗಡುವು ನೀಡಿದ್ದೇನೆ, ಈ ಹಿಂದೆ ಅವರು ರಸ್ತೆ ಗುಂಡಿ ಮುಚ್ಚಲು ಬಿಸಿ ಕಾಂಕ್ರೀಟ್ ಬಳಸುತ್ತಿದ್ದರು, ಇದರಿಂದ ಮಚ್ಚಿದ ಗುಂಡಿಗಳು ಕೆಲವೇ ವಾರಗಳಲ್ಲಿ ಕಿತ್ತು ಬರುತ್ತಿವೆ. ಹೀಗಾಗಿ ನಾನು ಈ ಸಲ ಗುಂಡಿ ಮುಚ್ಚಲು ಕೋಲ್ಡ್ ಕಾಂಕ್ರೀಟ್ ಮಿಕ್ಸ್ ಬಳಸಲು ಸೂಚಿಸಿದ್ದೇನೆ, ಇದಿ ತಾತ್ಕಾಲಿಕ ಗುಂಡಿ ಸಮಸ್ಯೆಗೆ ಇರುವ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ರಸ್ತೆ ಗುಂಡಿಗಳ ಬಗ್ಗೆ ಕೌನ್ಸಿಲರ್ ಅಥವಾ ಶಾಸಕರು ಮುಖ್ಯ ಎಂಜಿನೀಯರ್ ಗಮನಕ್ಕೆ ತಂದರೇ ಆ ಗುಂಡಿಯನ್ನು ಮುಚ್ಚುವ ಹೊಣೆಗಾರಿಕೆ ಅವರದ್ದಾಗಿದೆ. ಎಲ್ಲಾ ಕೌನ್ಸಿಲರ್ ಗಳಿಗೆ ಅವರ ವಾರ್ಡ್ ನಲ್ಲಿರುವ ರಸ್ತೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸುವಂತೆ ಮೇಯರ್ ತಿಳಿಸಬೇಕು ಎಂದು ಹೇಳಿದ್ದಾರೆ.
ಎಲ್ಲಾ ಸಮಸ್ಯೆಗಳಿಗೂ ರಾಜ್ಯ ಸರ್ಕಾರವನ್ನು ದೂಷಿಸಬಾರದು, ನಮಗೂ ಕೂಡ ಜವಾಬ್ದಾರಿಯಿದೆ, ಬಿಬಿಎಂಪಿಗೂ ಕೂಡ ಅದರದ್ದೇ ಆದ ಜವಾಬ್ದಾರಿಯಿದೆ. ಎಂದು ಹೇಳಿದ್ದಾರೆ.
ಒಮ್ಮೆ ಮಳೆ ನಿಂತು ಹೋದರೇ, ಇದಕ್ಕೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಸಭೆಯಲ್ಲಿ ಸಿಎಂ ಹೇಳಿದ್ದಾರೆ. ಈ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಮೇಯರ್ ಸಂಪತ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.