ಸಂಚಾರ ನಿಯಮ ಉಲ್ಲಂಘಿಸಿದವರ ಫೋಟೋ ಟ್ವೀಟ್ ಮಾಡಿದ ಸಂಚಾರಿ ಪೊಲೀಸ್ ಡಿಸಿಪಿ
ಬೆಂಗಳೂರು: ನಗರ ಪೂರ್ವ ಸಂಚಾರಿ ಡಿಸಿಪಿ ಅಭಿಷೇಕ್ ಗೋಯೆಲ್ ತಮ್ಮ ಟ್ವಿಟ್ಟರ್ ನಲ್ಲಿ ಪೊಲೀಸರ ಸಂದಿಗ್ಧ ಪರಿಸ್ಥಿತಿ ಬಗ್ಗೆ ಕವಿತೆ ಬರೆದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು. ಅದರ ಸಂಬಂಧಿತ ಫೋಟೋಗಳನ್ನು ಡಿಸಿಪಿ ಅಭಿಷೇಕ್ ಗೋಯೆಲ್ ತಮ್ಮ ಟ್ಟಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಬೆಂಗಳೂರು ಪೊಲೀಸರು ಹಲವು ವಿಷಯಗಳನ್ನು ಟ್ವೀಟ್ ಮಾಡುವ ಮೂಲಕ ಜನತೆಗೆ ಸಂಚಾರಿ ನಿಯಮಗಳ ಬಗ್ಗೆ ಶಿಕ್ಷಣ ನೀಡುತ್ತಿರುತ್ತಾರೆ.
ಕೇವಲ ಬೆಂಗಳೂರು ಮಾತ್ರವಲ್ಲದೇ ಬೇರೆ ರಾಜ್ಯಗಳ ಪೊಲೀಸರು ಹಾಕುವ ಹಲವು ಪೋಸ್ಟ್ ಗಳು ವೈರಲ್ ಆಗಿವೆ, ಸೋಮವಾರ ಆಂಧ್ರ ಪ್ರದೇಶ ಪೊಲೀಸ್ ಸಿಬ್ಬಂದಿಯೊಬ್ಬರು ಒಂದೇ ಬೈಕ್ ನಲ್ಲಿ 5 ಮಂದಿ ಪ್ರಯಾಣಿಸುತ್ತಿದ್ದವರಿಗೆ ಕೈ ಮುಗಿಯುತ್ತಿದ್ದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಕೆ. ಹನುಮಂತರಾಯುಡು ಎಂಬಾತ ತನ್ನ ಇಬ್ಬರು ಮಕ್ಕಳನ್ನು ಬೈಕ್ ನ ಪೆಟ್ರೋಲ್ ಪಂಪ್ ಮೇಲೆ ಕೂರಿಸಿಕೊಂಡು, ತನ್ನ ಹೆಂಡತಿ ಮತ್ತು ಮತ್ತೊಬ್ಬರನ್ನು ಹಿಂದಿನ ಸೀಟ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಫೋಟೋ ವೈರಲ್ ಆಗಿತ್ತು. ಆತ ಇದೇ ಮೊದಲ ಬಾರಿಯಲ್ಲಿ ಇದಕ್ಕು ಮುನ್ನ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ, ಎಚ್ಚರಿಕೆ ನೀಡಿದ್ದರೂ ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ 5 ಮಂದಿ ಜೊತೆ ಸಂತರಿಸುತ್ತಿದ್ದ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶುಭ್ ಕುಮಾರ್ ತಿಳಿಸಿದ್ದಾರೆ.