ಎಂಜಿ ರಸ್ತೆಯಲ್ಲಿ ಮತ್ಸ್ಯಕನ್ಯೆಯಾದ ನಟಿ ಸೋನುಗೌಡ (ಫೇಸ್ ಬುಕ್ ಚಿತ್ರ) 
ರಾಜ್ಯ

ಎಂಜಿ ರಸ್ತೆಯಲ್ಲಿ ಮತ್ಸ್ಯಕನ್ಯೆ..!: ರಸ್ತೆಗುಂಡಿ ಮುಚ್ಚಲು 'ಬಾದಲ್' ವಿಶಿಷ್ಟ ಅಭಿಯಾನ

ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಬಾಯಿತೆರೆದು ಅಪಾಯಕ್ಕೆ ಅಹ್ವಾನ ನೀಡಿ ನಿಂತಿರುವ ರಸ್ತೆಗುಂಡಿಗಳ ವಿರುದ್ಧ ಕಲಾವಿದ ಬಾದಲ್ ನಂಜುಂಡ ಸ್ವಾಮಿ ತಮ್ಮದೇ ಆದ ಶೈಲಿಯವ್ವಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು: ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಬಾಯಿತೆರೆದು ಅಪಾಯಕ್ಕೆ ಅಹ್ವಾನ ನೀಡಿ ನಿಂತಿರುವ ರಸ್ತೆಗುಂಡಿಗಳ ವಿರುದ್ಧ ಕಲಾವಿದ ಬಾದಲ್ ನಂಜುಂಡ ಸ್ವಾಮಿ ತಮ್ಮದೇ ಆದ ಶೈಲಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆ ಗುಂಡಿಗಳ ವಿರುದ್ದ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಲಾವಿದ ಬಾದಲ್ ನಂಜುಡಸ್ವಾಮಿ ಮತ್ಸ್ಯಕನ್ಯೆಯನ್ನು ಕರೆತಂದಿದ್ದರು. ಹೌದು ನಗರದ ಪ್ರತಿಷ್ಟಿತ ಎಂ.ಜಿ.ರಸ್ತೆಯಲ್ಲಿನ ಬೃಹತ್‌ ಗುಂಡಿಯನ್ನು ಕಲಾವಿದ ಬಾದಲ್‌  ನಂಜುಂಡಸ್ವಾಮಿ ಸ್ವಿಮ್ಮಿಂಗ್‌ ಪೂಲ್‌ ಮಾದರಿಯಲ್ಲಿ ಸಿದ್ದಪಡಿಸಿದ್ದರು. ವಿಶೇಷವೆಂದರೆ ಬಾದಲ್ ಅವರ ಈ ಕಾರ್ಯಕ್ಕೆ ನಟಿ ಸೋನುಗೌಡ ಕೂಡ ಸಾಥ್ ನೀಡಿದ್ದರು. ಬಾದಲ್ ಸೃಷ್ಟಿಸಿದ್ದ ರಸ್ತೆಗುಂಡಿಯ ಸ್ವಿಮ್ಮಿಂಗ್ ಪೂಲ್ ನಲ್ಲಿ ನಟಿ  ಸೋನುಗೌಡ ಮತ್ಸ್ಯಕನ್ಯೆಯ ರೀತಿಯ ವೇಷ ಧರಿಸಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದರು.

ಈ ಬಗ್ಗೆ ನಟಿ ಸೋನುಗೌಡ ಅವರನ್ನು ಮಾಧ್ಯಮಗಳು ಮಾತಿಗೆಳೆದಾಗ "ನಟಿಯಾಗಿ ನನಗೂ ಸಾಮಾಜಿಕ ಜವಾಬ್ದಾರಿ ಇದೆ. ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚಿ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಳೆದರೆಡು ವಾರಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ದಿಢೀರ್ ರಸ್ತೆಗುಂಡಿಗಳು ಬಾಯಿತೆರೆದಿದ್ದು, ಈಗಾಗಲೇ ಈ ಅಪಾಯಕಾರಿ ರಸ್ತೆಗುಂಡಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಹಲವು ವಾಹನ  ಸವಾರರು ಬಿದ್ದು ಗಾಯಗೊಂಡಿದ್ದಾರೆ.  ಸಿಎಂ ಸಿದ್ದರಾಮಯ್ಯ ಅವರು 15 ದಿನಗಳೊಳಗೆ ರಸ್ತುಗುಂಡಿ ಮುಚ್ಚುವಂತೆ ಆದೇಶ ನೀಡಿದ್ದಾರೆಯಾದರೂ ಆ ಕಾರ್ಯಕ್ಕೆ ಇನ್ನೂ ಚುರುಕು ಮುಟ್ಟಿಲ್ಲ. ನಗರಗ ಪ್ರಮುಖ ರಸ್ತೆಗಳಲ್ಲಿರುವ  ಗುಂಡಿಗಳ ಪರಿಸ್ಥಿತಿ ಹಾಗೆಯೇ ಇವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT