ರಾಜ್ಯ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

Srinivas Rao BV
ಬೆಂಗಳೂರು: ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿಪಡೆಯುತ್ತಿದೆ, ದೇಶದ ಸ್ವಾತಂತ್ರ್ಯಕ್ಕೆ ಮೊದಲು ಹೋರಾಡಿದ್ದು ಟಿಪ್ಪು ಸುಲ್ತಾನ್ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಮಾಧ್ಯಮವೊಂದು ವರದಿ ಮಾಡಿದೆ. 
ಅ.15 ರಂದು ಅರಮನೆ ಮೈದಾನದಲ್ಲಿ ನಡೆದ ಪಿಎಫ್ಐ ಸಮಾವೇಶದಲ್ಲಿ ಮಾತನಾಡಿರುವ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ, ಟಿಪ್ಪು ಸುಲ್ತಾನ್ ಕೊಡುಗೆಯ ಬಗ್ಗೆ ಮಾತನಾಡುವ ಭರಾಟೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, "ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ಮಾಡಿದ್ದು ಟಿಪ್ಪು ಸುಲ್ತಾನ್ ಗಾಂಧಿ, ಸುಭಾಷ್ ಏನು ಮಾಡಿಲ್ಲ". ಎಂದಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ಮಾಡಿದ್ದು ಟಿಪ್ಪು ಸುಲ್ತಾನ್, ಸ್ವಾತಂತ್ರ್ಯಕ್ಕಾಗಿ ಟಿಪ್ಪು ತನ್ನ ಮಕ್ಕಳನ್ನು ಅಡವಿಟ್ಟಿದ್ದ, ಆದರೆ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರ ಮಕ್ಕಳನ್ನು ಅಡವಿಟ್ಟಿದ್ದರೆ? ಎಂದು ಪ್ರಶ್ನಿಸಿದ್ದು, ಟಿಪ್ಪು ಪ್ರತಿಮೆ ಕೆಂಪು ಕೋಟೆಯ ಮೇಲೆ ಇರಬೇಕಿತ್ತು ಎಂದು ಹೇಳಿದ್ದಾರೆ. 
ದೇಶದಲ್ಲಿ ದನಗಳಿಗೆ ಗೌರವ ಇದೆ, ಜನರಿಗೆ ಇಲ್ಲ. ಕೇಂದ್ರ ಸರ್ಕಾರ  ದನಗಳ ಭಾರತ ಕಟ್ಟಲಿ, ನಾವು ಜನಗಳ ಭಾರತ ಕಟ್ಟುತ್ತೇವೆ ಎಂದು ಜ್ಞಾನ ಪ್ರಕಾಶ್ ಹೇಳಿದ್ದಾರೆ. 
SCROLL FOR NEXT