ಬೆಂಗಳೂರಿನಲ್ಲಿ ನಿನ್ನೆ ನಡೆದ ಹುತಾತ್ಮ ಪೊಲೀಸ್ ಸ್ಮರಣೆ ಕಾರ್ಯಕ್ರಮ 
ರಾಜ್ಯ

ಹುತಾತ್ಮ ಪೊಲೀಸ್ ಸ್ಮಾರಕ ನಿರ್ಮಾಣ, ಪೊಲೀಸ್ ಸಿಬ್ಬಂದಿ ವೇತನ ಏರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಹುತಾತ್ಮ ಪೊಲೀಸ್ ಸಿಬ್ಬಂದಿಯ ಸ್ಮಾರಕ ಮತ್ತು ಕ್ರೀಡಾಂಗಣವನ್ನು ಸ್ಥಾಪಿಸಲಾಗುವುದು ...

ಬೆಂಗಳೂರು: ಹುತಾತ್ಮ ಪೊಲೀಸ್ ಸಿಬ್ಬಂದಿಯ ಸ್ಮಾರಕ ಮತ್ತು ಕ್ರೀಡಾಂಗಣವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅವರು ನಿನ್ನೆ ಬೆಂಗಳೂರಿನಲ್ಲಿ ಪೊಲೀಸ್ ಹುತಾತ್ಮ ದಿನದ ಅಂಗವಾಗಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ 370 ಮಂದಿ ಪೊಲೀಸ್ ಸಿಬ್ಬಂದಿಯ ಕುಟುಂಬದವರನ್ನು ಸನ್ಮಾನಿಸಿ ಈ ವಿಷಯ ತಿಳಿಸಿದರು.
ಇದುವರೆಗೆ ರಾಜ್ಯದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಒಂದೇ ಒಂದು ಶಾಶ್ವತ ಸ್ಮಾರಕವಿಲ್ಲ. ಸಬ್ ಇನ್ಸ್ ಪೆಕ್ಟರ್ ಗಿಂತ ಮೇಲಿನ ರ್ಯಾಂಕಿನ ಪೊಲೀಸ್ ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಲಾಗುವುದು. 2016 ಸೆಪ್ಟೆಂಬರ್ ನಿಂದ 2017 ಆಗಸ್ಟ್  ನಡುವೆ ಹುತಾತ್ಮರಾದ 320 ಪೊಲೀಸ್ ಸಿಬ್ಬಂದಿಯನ್ನು ನಿನ್ನೆ ಸನ್ಮಾನಿಸಲಾಯಿತು. ಅವರಲ್ಲಿ 12 ಮಂದಿ ಕರ್ನಾಟಕದವರಾಗಿದ್ದರು.
ಬೆಳಗಾವಿ ವಿಧಾನಸಭೆ ಕಲಾಪದ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕೊರತೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಇನ್ನು ಮುಂದೆ ಸೂಕ್ತ ಸೌಲಭ್ಯ ಒದಗಿಸಿಕೊಡಲಾಗುವುದು. ಅಪರಾಧಿಗಳು ಅಪರಾಧಗಳನ್ನು ಮಾಡಲು ತಂತ್ರಜ್ಞಾನವನ್ನು ಬಳಸುತ್ತಿರುವಾಗ ಪೊಲೀಸರು ಕೂಡ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಆದಷ್ಟು ಶೀಘ್ರವೇ ಕೇಸು ಇತ್ಯರ್ಥಪಡಿಸಬೇಕು ಎಂದರು.
ಮೈಸೂರು ಲೋಕಾಯುಕ್ತ ಎಸ್ ಪಿ ಎಸ್. ರವಿ ಕುಮಾರ್, ವಿಜಯಪುರ ಲೋಕಾಯುಕ್ತ ಎಸ್ ಪಿ ಎಂ.ಬಿ.ಪಾಟೀಲ್, ಡಿಸಿಆರ್ ಬಿ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಮಹೇಶ್ ಕುಮಾರ್, ಎಸ್ ಐ ರಾಮಚಂದ್ರ ಹುಚಪ್ಪ ಬಳ್ಳಾರಿ, ಎಎಸ್ಐ ಟಿ.ಡಿ.ರಮೇಶ್, ಸುರೇಶ್ ಎಸ್.ದೆಂಗಿ, ರಮೇಶ್ ದೆಂಗಿ, ಡಿ.ಎಸ್.ಕಿರಣ್ ಕುಮಾರ್ ಮತ್ತು ಎನ್.ಲಕ್ಷ್ಮಣ್ ಅವರಿಗೆ ಮುಖ್ಯಮಂತ್ರಿ ಸನ್ಮಾನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Russia-Ukraine War: ರಷ್ಯಾ ದಾಳಿಯಿಂದ ಶಿಶು ಸೇರಿದಂತೆ ನಾಲ್ವರು ಸಾವು,18 ಮಂದಿಗೆ ಗಾಯ, ಪ್ರತೀಕಾರವಾಗಿ ಉಕ್ರೇನ್ ಮಾಡಿದ್ದೇನು?

ರಷ್ಯಾದಿಂದ ತೈಲ ಖರೀದಿಸಿ ಭಾರತ ಲಾಭ ಗಳಿಸುತ್ತಿದೆ ಹೇಳಿಕೆ: ಸತ್ಯ ಪರಿಶೀಲಿಸಿ ಬೂಟಾಟಿಕೆ ಎಂದ 'X', ಎಲಾನ್ ಮಸ್ಕ್ ವಿರುದ್ಧ ಪೀಟರ್ ನವರೊ ಸಿಡಿಮಿಡಿ

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಬಾನು ಮುಷ್ತಾಕ್ ಕನ್ನಡದ ವಿರುದ್ಧ ಮಾತನಾಡಿದ್ದಕ್ಕೆ ಯಾವುದೇ ಸಾಕ್ಷಿಯಿಲ್ಲ, ನಿಸಾರ್ ಅಹ್ಮದ್ ಉದ್ಘಾಟಿಸಿದಾಗೇಕೆ ಮೌನವಾಗಿದ್ದಿರಿ?

Gadag: ಶೌಚಾಲಯ ಇಲ್ಲದ ಶಾಲೆ; ಬಹಿರ್ದೆಸೆಗೆ ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳು!

SCROLL FOR NEXT