ಗದಗ: ಕೆ ಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ಮಹಿಳೆ ಸಾವು, 8 ಮಂದಿಗೆ ಗಾಯ 
ರಾಜ್ಯ

ಗದಗ: ಕೆ ಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ಮಹಿಳೆ ಸಾವು, 8 ಮಂದಿಗೆ ಗಾಯ

ಸರ್ಕಾರಿ ಬಸ್ ಅಪಘಾತಕ್ಕೀಡಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು, 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಸಮೀಪ ನಡೆದಿದೆ.

ಗದಗ: ಸರ್ಕಾರಿ ಬಸ್ ಅಪಘಾತಕ್ಕೀಡಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು, 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಸಮೀಪ ನಡೆದಿದೆ.
ಗಜೇಂದ್ರಗಡ ಬಳಿಯ ಕೊಡಗಾನೂರು ಬಳಿ ಸುಮಾರು 30 ಪ್ರಯಾಣಿಕರಿದ್ದ ಬಸ್ ಅಪಗಾತಕ್ಕೀಡಾಗಿತ್ತು. ಇದರಲ್ಲಿ ನಾಗವ್ವ ಅಳವಂಡಿ (50) ಎನ್ನುವವರು ಮೃತಪಟ್ಟಿದ್ದು ಇತರೆ  8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಜೇಂದ್ರಗಡದಿಂದ ಗದಗಕ್ಕೆ ತೆರಳುತ್ತಿದ್ದ ಬಸ್ ಕೊಡಗಾನೂರು ಬಳಿ ಬರುತ್ತಿದ್ದಂತೆ ಚಾಲಕನ ಅಜಾಗರೂಕತೆಯ ಕಾರಣ  ರಸ್ತೆ ಪಕ್ಕಕ್ಕೆ ಪಲ್ಟಿ ಆಗಿದೆ. ಆ ವೇಳೆ ನಾಗವ್ವ ಅವರಿಗೆ ಗಂಭೀರ ಗಾಯವಾಗಿದ್ದು ಆಂಬುಲೆನ್ಸ್ ಗೆ ಕರೆ ಮಡಿದರೂ ಅದು ಸೂಕ್ತ ಸಮಯಕ್ಕೆ ಬರದಿದ್ದಾಗ ಇನ್ನೊಂದು ಸರ್ಕಾರಿ ಬಸ್‍ನಲ್ಲಿಯೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ನಾಗವ್ವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ 8 ಜನರನ್ನು ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಜೇಂದ್ರಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!