ಪುತ್ರರನ್ನು ಕಳೆದುಕೊಂಡಿರುವ ನಾಗಮ್ಮ ಮುಕ್ರಿ
ಗೋಕರ್ಣ: ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣಕ್ಕೆ ಪಡಿತರ ಸಿಗದೆ ಕೇವಲ 15 ದಿನಗಳಲ್ಲಿ ಒಂದೇ ಕುಟುಂಬದ ಮೂವರು ಹಸಿವಿನಿಂದ ಸಾವನ್ನಪ್ಪಿದ ಪ್ರಕರಣ ಬಳಿಕ ಗೋಕರ್ಣದಲ್ಲಿರುವ ಕುಟುಂಬವೊಂದು ಕೊನೆಗೂ ಪಡಿತರವನ್ನು ಪಡೆದುಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಬೆಳೆಹಿತ್ತಲ ಪ್ರದೇಶದ ನಿವಾಸಿಯಾಗಿರುವ ನಾಗಮ್ಮ ಮುಕ್ರಿ ಎಂಬುವವರ ಮೂವರು ಪುತ್ರರು ಕಳೆದ ಜುಲೈ ತಿಂಗಳಿನಲ್ಲಿ ಕೇವಲ 15 ದಿನಗಳಲ್ಲಿ ಸಾವನ್ನಪ್ಪಿದ್ದರು.
ಮುಕ್ರಿ ಕುಟುಂಬ ಬಿಪಿಎಲ್ (ಬಡತನ ರೇಖೆಗಿಂತ ಕಡಿಮೆ) ಕಾರ್ಡ್ ಹೊಂದಿದ್ದು, ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣಕ್ಕೆ ಅಧಿಕಾರಿಗಳು ಪಡಿತರವನ್ನು ನೀಡಲು ನಿರಾಕರಿಸಿದ್ದರು. ಬೆಳೆಹಿತ್ತಲ ಪ್ರದೇಶದಲ್ಲಿರುವ ಖಾಸಗಿ ಭೂಮಿಯಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ವಾಸವಿರುವ ನಾಗಮ್ಮ ಅವರಿಗೆ ನಾಲ್ವರು ಪುತ್ರರಿದ್ದಾರೆ.
ನಾಲ್ವರು ಪುತ್ರರಲ್ಲಿ ಮೂವರು ಮದ್ಯವ್ಯಸನಿಗಳಾಗಿದ್ದು, ಮತ್ತೊಬ್ಬ ಪುತ್ರ ಅನಾರೋಗ್ಯ ಪೀಡಿತನಾಗಿದ್ದಾನೆ. ಮೂವರು ಪುತ್ರರೂ ಕೆಲಸಕ್ಕೆ ಹೋಗುತ್ತಿದ್ದರೂ, ಬಂದ ಹಣವನ್ನು ಮದ್ಯಕ್ಕೆ ಖರ್ಚು ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ನಾಗಮ್ಮ ಮಕ್ರಿಯವರೇ ಮನೆಯ ಹಿರಿಯ ಮಹಿಳೆಯಾಗಿದ್ದು, ಆಧಾರ್ ಕಾರ್ಡ್ ನ್ನು ಪಡೆದುಕೊಂಡಿರಲಿಲ್ಲ. ಆದರೆ, ನಾಲ್ಕು ಮಕ್ಕಳೂ ಆಧಾರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಆಧಾರ್ ಕಾರ್ಡ್ ಗಳು ಬಂದಿರಲಿಲ್ಲ. ಆಧಾರ್ ಕಾರ್ಡ್ ಕುರಿತಂತೆ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಿರುವ ಅಧಿಕಾರಿಗಳು ನಾಗಮ್ಮ ಅವರಿಗೆ ಪಡಿತರ ನೀಡಲು ನಿರಾಕರಿಸಿದ್ದಾರೆ.
ಸರ್ಕಾರ ನೀಡುತ್ತಿದ್ದ ಪಡಿತರವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಇದು ದೊಡ್ಡ ಹೊಡೆತವನ್ನೇ ನೀಡಿದೆ. ನಾಗಮ್ಮ ಅವರು ದೇಗುಲಗಳಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು.
ಗ್ರಾಮಸ್ಥರು ಹೇಳುವ ಪ್ರಕಾರ, ನಾಗಮ್ಮ ಅವರ ಪುತ್ರರು ಮದ್ಯವ್ಯಸನಿಗಳಾಗಿದ್ದು, ಸರ್ಕಾರ ಪಡಿತರವನ್ನೇ ನಂಬಿಕೊಂಡು ಬದುಕುತ್ತಿದ್ದ ಪರಿಣಾಮ ಹಸಿವಿನಿಂದ ಮೂವರು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
ನಾಗಮ್ಮ ಅವರ ಸೊಸೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ಪತಿ ಹಾಗೂ ಆತನ ಸಹೋದರರು ಮದ್ಯವ್ಯಸನಿಯಾಗಿದ್ದ ಕಾರಣ ಪತಿಯನ್ನು ತೊರೆದಿದ್ದರು.
ಹಸಿವಿನಿಂದಾಗಿ 3 ಸಾವನ್ನಪ್ಪಿದ ಪ್ರಕರಣದ ಬಳಿಕ ನಾಗರಿಕ ಹಕ್ಕುಗಳ ಜನತಾ ಒಕ್ಕೂಟದ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ವರದಿಯೊಂದರನ್ನು ಸಲ್ಲಿಸಿದ್ದರು. ಈ ವರದಿಯಲ್ಲಿ ಬಿಪಿಎಲ್ ಅಡಿಯಲ್ಲಿ ಮಾಸಿಕವಾಗಿ ಪಡಿತರ ಆಹಾರವನ್ನು ಪಡೆಯಲು ಅರ್ಹರಾಗಿದ್ದ ಮುಕ್ರಿಯ ಕುಟುಂಬಕ್ಕೆ 2016ರ ಡಿಸೆಂಬರ್ ನಿಂದ ಪಡಿತರ ವನ್ನು ನೀಡಲಾಗುತ್ತಿರಲಿಲ್ಲ. ಅವರು ಆಧಾರ್ ಕಾರ್ಡ್ ಹೊಂದಿಲ್ಲವೆಂಬ ಕಾರಣಕ್ಕಾಗಿ ಅವರಿಗೆ ಪಡಿತರವನ್ನು ನಿರಾಕರಿಸಲಾಗಿತ್ತೆಂದು ಆರೋಪಿಸಿದ್ದರು. ಹಸಿವಿನಿಂದಲೇ ಮೂವರು ಸಾವನ್ನಪ್ಪಿದ್ದಾರೆಂದು ದೂರು ನೀಡಿದ್ದರು.
ಬಳಿಕ ಈ ವರದಿಯನ್ನು ನಾಗರೀಕ ಸರಬರಾಜು ಸಚಿವ ಯು.ಟಿ ಖಾದರ್ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಆಯುಕ್ತರು, ಸುಪ್ರೀಂಕೋರ್ಟ್'ಗೆ ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಇದೀಗ ಮುಕ್ರಿ ಕುಟುಂಬಕ್ಕೆ ಪಡಿತರವನ್ನು ನೀಡಲು ಮುಂದಾಗಿದೆ.
ಹಸಿವಿನಿಂದ ಮೂವರು ಸಾವನ್ನಪ್ಪಿಲ್ಲ: ಡಿಸಿ
ಹಸಿವಿನಿಂದ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಉಪ ಆಯುಕ್ತ ಎಸ್.ಎಸ್. ನಕುಲ್ ಅವರು ಹೇಳಿದ್ದಾರೆ.
ಘಟನೆ ಬಳಿಕ ಅಧಿಕಾರಿಗಳ ಕಾರವಾರದ ಅಧಿಕಾರಿಗಳ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ದುರಂತ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ 50 ಅಕ್ಕಿ ಹಾಗೂ ತರಕಾರಿಗಳಿತ್ತು. ಸುತ್ತಮುತ್ತಲಿನ ಉಚಿತ ಆಹಾರ ಛತ್ರಗಳಿವೆ. ನಾಗಮ್ಮ ಅವರ ಸೊಸೆ ಕೂಡ ಗೋಕರ್ಣ ಗ್ರಾಮ ಪಂಚಾಯಿತಿ ಸದಸ್ಯರಾಗಿದದಾರೆಂದು ತಿಳಿಸಿದ್ದಾರೆ.