ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲೂಕಿನಲ್ಲಿ ಹಸಿವಿನಿಂದ ಮೂವರು ಸಾವನ್ನಪ್ಪಿದ್ದ ಕುಟುಂಬ ಆಧಾರ್ ಕಾರ್ಡ್ ಹೊಂದಿತ್ತು ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಬುಧವಾರ ಸ್ಪಷ್ಟಪಡಿಸಿದೆ.
ಗೋಕರ್ಣ ಹಸಿವಿನಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯುಐಡಿಎಐ ಅಧಿಕಾರಿಗಳು, ಘಟನೆ ಬಳಿಕ ಬೆಳೆಹಿತ್ತಲ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ನಾಗಮ್ಮ ಮುರು ಮುಕ್ರಿ ಹಾಗೂ ಮೃತಪಟ್ಟಿರುವ ಅವರ ಮೂವರು ಮಕ್ಕಳೂ ಆಧಾರ್ ಸಂಖ್ಯೆಗಳನ್ನು ಪಡೆದುಕೊಂಡಿರುವುದು ತಿಳಿದುಬಂದಿತ್ತು ಎಂದು ಹೇಳಿದ್ದಾರೆ.
ಪರಿಶೀಲನೆ ವೇಳೆ ನಾಗಮ್ಮ ಅವರು ತಮ್ಮ ಪುತ್ರರಾದ ನಾರಾಯಣ ಮುಕ್ರಿ ಹಾಗೂ ವೆಂಕಟರಮಣ ಮುಕ್ರಿಯವರ ಆಧಾರ್ ಕಾರ್ಡ್ ಗಳನ್ನು ತೋರಿಸಿದ್ದಾರೆ. ಆದರೆ, ಸುಬ್ಬು ಮುಕ್ರಿಯವರ ಆಧಾರ್ ಕಾರ್ಡ್ ಮಾತ್ರಿ ಸಿಕ್ಕಿರಲಿಲ್ಲ. ನಾಗಮ್ಮ ಅವರು ಪುತ್ರರು ಹಸಿವಿನಿಂದ ಸಾವನ್ನಪ್ಪಿರಲಿಲ್ಲ.
ನಾಗಮ್ಮ ಮುಕ್ರಿ ಹಾಗೂ ಅವರ ಮತ್ತೊಬ್ಬ ಪುತ್ರ ಅನಾರೋಗ್ಯಕ್ಕೀಡಾಗಿರುವ ಗಣಪತಿ ಮುಕ್ರಿ, ಗಣಪತಿ ಪತ್ನಿ ಹಾಗೂ ಮೂವರು ಮಕ್ಕಳನ್ನು ದೈಹಿಕ ಆರೋಗ್ಯವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಂದು ತಿಳಿಸಿದ್ದಾರೆ.