ಬೆಂಗಳೂರು ರಸ್ತೆ ದುರವಸ್ಥೆ, ಬಿಬಿಎಂಪಿಗೆ ಎಚ್ಚರಿಸಿದ ಲೋಕಾಯುಕ್ತ
ಬೆಂಗಳೂರು: ಭಾರತದ ಐಟಿ ರಾಜಧಾನಿ ಎಂದು ಖ್ಯಾತವಾದ ಬೆಂಗಳೂರಿನಲ್ಲಿ ಇತ್ತೀಚೆಗೆ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಸಾವುಗಳು ಜಾಗತಿಕವಾಗಿ ಗಂಭೀರ ಪರಿಣಾಮ ಬೀರುತ್ತಿದೆ. ಈ ಕುರಿತಂತೆ ಕರ್ನಾಟಕ ಲೋಕಾಯುಕ್ತ, ಬೃಅಹತ್ ಬೆಂಗಳೂರು ಮಹಾ ನಗರ ಪಾಲಿಕೆಗೆ ಚಾಟಿ ಬೀಸಿದೆ.
"ಬೆಂಗಳೂರು ನಗರವು ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ದೇಶದಾದ್ಯಂತದ ಮತ್ತು ವಿದೇಶಗಳಿಂದಲೂ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಸಂಖ್ಯೆಯ ರಸ್ತೆಗಳಿವೆ, ಎನ್ನುವುದು ನಿಸ್ಸಂಶಯ. ಹಾಗೆಂದು ರಸ್ತೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾದದಿರುವುದು ಕ್ಷಮ್ಯವಲ್ಲ.ನಗರದ ರಸ್ತೆಗಳ ಪರಿಸ್ಥಿತಿ ನಗರದ ಬೆಳವಣಿಗೆ, ಅಭಿವೃದ್ಧಿಯ ಕುರಿತು ಅಧಿಕಾರಿಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದುವೇ ದೇಶ ಮತ್ತು ವಿದೇಸದಿಂದ ಹೂಡಿಕೆದಾರರನ್ನು ಆಕರ್ಷಿಸುತ್ತದೆ" ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ನ್ಯಾಯಮೂರ್ತಿ ಶೆಟ್ಟಿ ಅವರು ನಗರದ ಮಿತಿಯಲ್ಲಿರುವ ರಸ್ತೆಗಳ ಸರಿಯಾದ ನಿರ್ವಹಣೆ ಬಿಬಿಎಂಪಿ ಕರ್ತವ್ಯವಾಗಿದೆ ಎಂದರು. "ರಸ್ತೆಗಳು ಉತ್ತಮವಾಗಿದ್ದು ವಾಹನ ಸಂಚಾರಕ್ಕೆ ಅನುಕೂಲಕರವಾಗಿದೆ ಕಾತ್ರಿಪಡಿಸುವುದು ಆಯಾ ವಲಯದ ಇಂಜಿನಿಯರ್ ಗಳ ಕರ್ತವ್ಯವಾಗಿದೆ. ಹದಗೆಟ್ಟ ರಸ್ತೆಗಳ ವಿವರ ಬಿಬಿಎಂಪಿ ಹೊಂದಿರತಕ್ಕದ್ದು. ಅಂತಹಾ ರಸ್ತೆ ದುರಸ್ತಿಯ ಕುರಿತು ತಕ್ಷಣವೇ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವದು ಬಿಬಿಎಂಪಿ ಯ ಇಂಜಿನಿಯರ್ ಇಲಾಖೆಯ ಕರ್ತವ್ಯ "ಎಂದು ಅವರು ಆದೇಶಿಸಿದರು.
"ಕೆಲಸದ ಮತ್ತಷ್ಟು ಪ್ರಗತಿಯನ್ನು ತೋರಿಸುವುದಕ್ಕಾಗಿ ಇಂದಿನಿಂದ ಎರಡು ವಾರಗಳ ಸಮಯವನ್ನು ನೀದಲಾಗುವುದು ಮತ್ತು ಈ ಅವಧಿಯು ನ.10, 2017 ಕ್ಕೆ ಮುಗಿಯಲಿದ್ದು ಅಷ್ಟ್ರಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆಂದು ಆಶಿಸಲಾಗುತ್ತದೆ." ನ್ಯಾಯಮೂರ್ತಿ ಶೆಟ್ಟಿ ಹೇಳಿದರು. ನಗರದಲ್ಲಿನ ಗುಂಡಿಗಳಿಂದ ಉಂಟಾದ ಸಾವುಗಳ ಸರಣಿಯ ಕುರಿತು ಸ್ವಯಂ ಮೋಟೋ ಪ್ರಕರಣವನ್ನು ನೊಂದಾಯಿಸಿಕೊಂಡ ನಂತರ ಲೋಕಾಯುಕ್ತ ನೀಡಿದ ಸೂಚನೆಯಂತೆ ಬಿಬಿಎಂಪಿ ಸ್ಥಿತಿಗತಿ ವರದಿಯನ್ನು ಸಲ್ಲಿಸಿದೆ.
ಮೆಟ್ರೋ ನಿಗಮದಿಂದ ಬಾರದ ಸ್ಪಂದನೆ
ಬೆಂಗಳೂರು ಮೆಟ್ರೊ ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಇಲ್ಲವೇ ಅವರ ಪ್ರತಿನಿಧಿ ಗಳಾಗಲೀ ಈ ವರೆಗೂ ಲೋಕಾಯುಕ್ತದ ಮುಂದೆ ಹಾಜರಾಗಲಿಲ್ಲ. ಮೆಟ್ರೊ ರೈಲು ಕಾಮಗಾರಿಯ ಕಾರಣ ರಸ್ತೆಗಳು ಹಾನಿಗೊಳಗಾದ ಕುರಿತು ಖರೋಲಾ ಅವರಿಗೆ ಲೋಕಾಯುಕ್ತ ನೋಟೀಸ್ ಜಾರಿ ಮಾಡಿತ್ತು..