ಸಾಂದರ್ಭಿಕ ಚಿತ್ರ 
ರಾಜ್ಯ

ವಿಜಯಪುರ: ಪೋಲೀಸ್ ಮತ್ತು ರೌಡಿಗಳ ನಡುವೆ ಗುಂಡಿನ ಕಾಳಗ, ರೌಡಿ ಸಾವು, ಪಿಎಸ್ಐ ಸ್ಥಿತಿ ಗಂಭೀರ

ಭೀಮಾತೀರದಲ್ಲಿ ಪೊಲೀಸ್ ಮತ್ತು ರೌಡಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಯಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯಪುರ: ಭೀಮಾತೀರದಲ್ಲಿ ಪೊಲೀಸ್ ಮತ್ತು ರೌಡಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಯಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಗಂಭೀರವಾಗಿ  ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದಲ್ಲಿ ಲೀಸ್ ಹಾಗೂ ಭೀಮಾತೀರದ ಹಂತಕರ ನಡುವೆ ಗುಂಡಿನ ಚಕಮಕಿ ನಡೆಯಿತು.
ಕುಖ್ಯಾತ ರೌಡಿ ಧರ್ಮರಾಜ ಚಡಚಣ ಹಾಗೂ ಬೆಂಬಲಿಗರಿಂದ ಪಿಎಸ್ಐ ಗೋಪಾಲ ಹಳ್ಳೂರು ಎನ್ನುವವರ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಗೊಲಗಾದ ಪಿಎಸ್ಐ ಅವರಿಗೆ ಗುಂಡು ತಗುಲಿದ್ದು ಗಂಭೀರ ಗಾಯಗೊಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಕಾಳಗದಲ್ಲಿ ಭಾಗಿಯಾಗಿದ್ದ ರೌಡಿ ಧರ್ಮರಾಜ ಚಡಚಣ ಪೋಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧರ್ಮರಾಜನ ಮನೆ ಮೇಲೆ ದಾಳಿ ಮಾಡಲು ಹೋಗಿದ್ದ ಪಿ.ಎಸ್.ಐ. ಗೋಪಾಲ ಹಳ್ಳೂರ ಮತ್ತು ತಂಡದ ತೆರಳಿತ್ತು ಎನ್ನಲಾಗಿದ್ದು ಈ ವೇಳೆ ಗುಂಡಿನ ಕಾಳಗ ನಡೆದಿದೆ. ಸ್ಥಳಕ್ಕೆ ಎಸ್ ಪಿ ಕುಲದೀಪ ಜೈನ್ ಹಾಗೂ ಎಎಸ್ ಪಿ ಶಿವಕುಮಾರ ಗುಣಾರಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.  ಪುತ್ರಪ್ಪ ಹಾಗೂ ಫಯಾಜ್ ಮುಫ್ತಿಫ್ ಎನ್ನುವರ ಕೊಲೆಯಲ್ಲಿ ಭಾಗಿಯಾಗಿದ್ದ ಧರ್ಮರಾಜ್, ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ; ಎಲ್ಲಿದೆ ನ್ಯಾಯ? VHP

ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್