ಬೆಂಗಳೂರು: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್ಎಸಿಓ) ಎಲ್ಲಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಯೋಜನೆಯ ನಿರ್ದೇಶಕರಿಗೆ ಆಧಾರ್ ಜೊತೆ ಜೀವ ರಕ್ಷಕ ಆಂಟಿ ರೆಟ್ರೋವೈರಲ್ ಥೆರಪಿ (ಎಆರ್ ಟಿ) ಸೇವೆಯನ್ನು ಲಿಂಕ್ ಮಾಡುವಂತೆ ಆದೇಶಿಸಿದ ಒಂದು ವರ್ಷದ ತರುವಾಯ ಎಚ್ಐವಿ ಪೀಡಿತರಲ್ಲಿ ಶೇ.50 ಕ್ಕಿಂತಲೂ ಕಡಿಮೆ ಜನರು ತಮ್ಮ ಆಧಾರ್ ಲಿಂಕ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಳಂಕದ ಭಯ ಕಾರಣ ಎನ್ನಲಾಗಿದೆ. ಕರ್ನಾಟಕವು ದೇಶದ ಎಂಟು ಅತಿ ಹೆಚ್ಚು ಎಚ್ ಐವಿ ಪೀಡಿತರಿರುವ ರಾಜ್ಯದಲ್ಲಿ ಒಂದಾಗಿದೆ.
"ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಮತ್ತು ನಕಲು ತಪ್ಪಿಸಲು, ಆಧಾರ್ ಕಾರ್ಡುಗಳೊಂದಿಗೆ ಎಲ್ಲಾ ಪಿಎಲ್ ಎಚ್ ಐವಿ ಗಳು (ಎಚ್ಐವಿ ಜೊತೆ ಜೀವಿಸುವ ಜನರು) ಲಿಂಕ್ ಮಾಡುವುದು ಅಗತ್ಯವಾಗಿದೆ. ಎಲ್ಲ ಪಿಎಲ್ ಎಚ್ ಐವಿ ಗಳು ತಮ್ಮ ಆಧಾರ್ ಕಾರ್ಡ್ಗಳನ್ನು ಎಆರ್ ಟಿ ಕೇಂದ್ರಗಳಿಗೆ ತರುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು ಅಥವಾ ಯಾರು ಆಧಾರ್ ಹೊಂದಿಲ್ಲವೋ ಅಂತಹವರಿಗೆ ಆಧಾರ್ ಕಾರ್ಡ್ ವಿತರಣೆಗಾಗಿ ಆಧಾರ್ ಕೇಂದ್ರಗಳನ್ನು ಸಂಪರ್ಕಿಸಲು ನೆರವಾಗಬೇಕು. " ಅ.3 ಆದೇಶದಲ್ಲಿ ಹೇಳಿದೆ.
ಎಚ್ಐವಿ ಪೀಡಿತರಲ್ಲಿ ಹೆಚ್ಚಾಗಿ ಲೈಂಗಿಕ ಕಾರ್ಯಕರ್ತರು, ಟ್ರಕರ್ಸ್, ವಲಸಿಗರು ಮತ್ತು ಸಲಿಂಗಕಾಮಿಗಳು ಇದ್ದಾರೆ. ಎನ್ ಜಿಓ ಗಳ ನೆಟ್ ವರ್ಕ್ ಮೂಲಕ ಈ ಗುಂಪಿನವರ ಜತೆ ಆರೋಗ್ಯ ಇಲಾಖೆಯು ಮಧ್ಯಸ್ಥಿಕೆಗಳನ್ನು ಸಾಧಿಸುತ್ತದೆ. ವಿಜಯ ಮಹಿಳಾ ಸಂಘದ ರಂಜನಿ, ವಲಸಿಗ ಕಾರ್ಮಿಕರ ಯೋಜನೆಯ ನಿರ್ದೇಶಕಿ ಹೇಳುವಂತೆ, "ಈ ಕಾರ್ಮಿಕರು ಮಹಾರಾಷ್ಟ್ರ, ಬಿಹಾರ, ಇತರ ಉತ್ತರದ ರಾಜ್ಯಗಳಿಂದ ಬಂದವರು. ನಮ್ಮ ಗುಂಪಿನಲ್ಲಿರುವವರು ಎಲ್ಲರೂ ಎಚ್ಐವಿ ಪೀಡಿತ ಮಹಿಳೆಯರಾಗಿದ್ದಾರೆಮತ್ತು ಅವರು ತಮ್ಮ ಆಧಾರ್ ಸಂಖ್ಯೆಯನ್ನು ಡೇಟಾಬೇಸ್ ನೊಂದಿಗೆ ಲಿಂಕ್ ಮಾಡುವುದರಿಂದ ನಾವು ಎಚ್ ಐವಿ ಬಾಧಿತರೆಂದು ಎಲ್ಲರಿಗೂ ತಿಳಿದುಬಿಡುತ್ತದೆ ಎಂದು ಭಯ ಪಡುತ್ತಾರೆ. ಎಆರ್ ಟಿ ಕೇಂದ್ರಗಳಿಗೆ ಹೋಗುವಂತೆ ಅವರನ್ನು ಮನವೊಲಿಸುವುದು ಅತ್ಯಂತ ಕ್ಲಿಷ್ಟಕರ ಕೆಲಸವಾಗಿದೆ. ಅಲ್ಲಿ ಅವರಿಗೆ ಐಡಿ ಪ್ರೂಫ್ ಗಳನ್ನು ಕೇಳಿದಾಗ ತಾವು ಎಚ್ ಐವಿ ಬಾಧಿತರೆಂದು ಸಾರ್ವಜನಿಕವಾಗಿ ಗುರುತಿಸುತ್ತಾರೆ ಎಂದು ಹೆದರುತ್ತಾರೆ"
ಅದೇ ಸಂಸ್ಥೆಯಿಂದ ಗೀತಾ ಲೈಂಗಿಕ ಕಾರ್ಯಕರ್ತೆಯರ ವಿಭಾಗದ ನಿರ್ದೇಶಕರಾಗಿದ್ದಾರೆ, "ನನ್ನ ಗುಂಪಿನಲ್ಲಿ 32 ಮಂದಿ ಎಚ್ಐವಿ ಬಾಧಿತರಿದ್ದಾರೆ. ಎಲ್ಲರೂ ತಮ್ಮ ಎಆರ್ ಟಿ ಸೇವೆಗಳನ್ನು ಆಧಾರ್ ಜೊತೆ ಲಿಂಕ್ ಮಾಡಿದ್ದಾರೆ ಏಕೆಂದರೆ ಅವರು ಕಾರ್ಡ್ ಗಳನ್ನು ತೋರಿಸದೆ ಚಿಕಿತ್ಸೆ ಪಡೆದುಕೊಲ್ಳಲು ಸಾದ್ಯವಿಲ್ಲ "ಎಂದು ಅವರು ಹೇಳಿದರು.
ಹೀಗಿದ್ದರೂ, ರಾಷ್ಟ್ರೀಯ ಏಡ್ಸ್ ನಿಯಂತ್ರನ ಸಂಸ್ಥೆ (ಎನ್ಎಸಿಓ) ರಾಜ್ಯದ ಪ್ರಾದೇಶಿಕ ಸಂಯೋಜಕರಾಗಿ, ರವಿ ಕುಮಾರ್ ಬಿ. "ಆಧಾರ್ ಇಲ್ಲದಿರುವುದಕ್ಕೆ ಯಾವುದೇ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸಿಲ್ಲ. ಅವನು / ಅವಳು ಆಧಾರ್ ಲಿಂಕ್ ಮಾಡಲು ಬಯಸದಿದ್ದರೆ, ಅವರು ಹಾಗೆಂದು ಬರೆದು ಕೊದಬಹುದುದು, ನಾವು ಅವರನ್ನು ಒತ್ತಾಯಿಸುವುದಿಲ್ಲ." ಎಂದೆನ್ನುತ್ತಾರೆ.
"ಸುಮಾರು 50 ಪ್ರತಿಶತದಷ್ಟು ರೋಗಿಗಳು ತಮ್ಮ ಆಧಾರ್ ಅನ್ನು ಲಿಂಕ್ ಮಾಡಿಲ್ಲ. ಆಧಾರ್ ನೊಂದಿಗೆ ಸರ್ಕಾರದ ಸೌಲಭ್ಯಗಳನ್ನು ಅವರು ಪಡೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಆಧಾರ್ ನೊಂದಾವಣೆಯಾದವರೊದನೆ ನಾವು ಸಮಾಲೋಚನೆಗಳನ್ನು ನಡೆಸುವುದು ಸುಲಭವಾಗಲಿದೆ. ನಾವು ಎಲ್ಲಿಯೂ ಗೌಪ್ಯತೆ ಉಲ್ಲಂಘನೆ ಮಾಡುವುದಿಲ್ಲ. ಅವರ ವೈಯುಕ್ತಿಕ ವಿವರಗಳನ್ನು ಹಂಚಿಕೊಳ್ಳುವುದಿಲ್ಲ." ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos