ಮೃತ ಬಾಲಕಿ ಚಂದನಾ 
ರಾಜ್ಯ

ಬೆಂಗಳೂರು: ಡ್ಯಾನ್ಸ್ ಮಾಸ್ಟರ್ ಕಿರುಕುಳ, ತರಗತಿಯಲ್ಲೇ ಬಾಲಕಿ ಆತ್ಮಹತ್ಯೆ

ಡ್ಯಾನ್ಸ್ ಮಾಸ್ಟರ್ ಕಿರುಕುಳದಿಂದ ಬೇಸತ್ತ 12 ವರ್ಷದ ಬಾಲಕಿಯೊಬ್ಬಳು ಡ್ಯಾನ್ಸ್ ತರಗತಿಯಲ್ಲಿಯೇ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕದ ...

ಬೆಂಗಳೂರು: ಡ್ಯಾನ್ಸ್ ಮಾಸ್ಟರ್ ಕಿರುಕುಳದಿಂದ ಬೇಸತ್ತ 12 ವರ್ಷದ ಬಾಲಕಿಯೊಬ್ಬಳು ಡ್ಯಾನ್ಸ್ ತರಗತಿಯಲ್ಲಿಯೇ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕದ ಅಟ್ಟೂರು ಲೇಔಟ್ ನಲ್ಲಿ ನಡೆದಿದೆ.
ಡ್ಯಾನ್ಸ್ ಕ್ಲಾಸ್ ಮಾಸ್ಟರ್ ಸತೀಶ್ ಎಂಬಾತನ ಕಿರುಕುಳಕ್ಕೆ ಬೇಸತ್ತ ಚಂದನಾ ಎಂಬ ಬಾಲಕಿ ಡ್ಯಾನ್ಸ್ ಕ್ಲಾಸ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕುಮಾರ್ ಮತ್ತು ಜ್ಯೋತಿ ಎಂಬುವರ ಪುತ್ರಿ ಚಂದನಾ ಖಾಸಗಿ ಶಾಲೆಯಲ್ಲಿ  ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಡ್ಯಾನ್ಸ್ ಮಾಸ್ಟರ್ ಸತೀಶ್(28) ಚಂದನಾ ನಿಯಮಿತವಾಗಿ ಡ್ಯಾನ್ಸ್ ಕ್ಲಾಸ್ ಗೆ ಹಾಜರಾಗುವುದಿಲ್ಲ ಎಂದು ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಮೃತ ಬಾಲಕಿಯ ಪೋಷಕರು ಸತೀಶ್ ನನ್ನು ಥಳಿಸಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಸಂಜೆ ಘಟನೆ ಸಂಭವಿಸಿದೆ. ಸೋಮವಾರ ಸಂಜೆ ಬದರಿನಾಥ ಡ್ಯಾನ್ಸ್ ಶಾಲೆಗೆ ಬಂದ ಆಕೆ ಬ್ಯಾಗ್ ನಲ್ಲಿ ವಿಷ ತಂದು ಕುಡಿದಿದ್ದಾಳೆ.ಇದನ್ನು ಗಮನಿಸಿದ ಇತರೆ ವಿದ್ಯಾರ್ಥಿಗಳು ತರಬೇತಿ ದಾರನಿಗೆ ಹೇಳಿದ್ದಾರೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಂದನಾ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್