ಗೌರಿ ಲಂಕೇಶ್ ಮತ್ತು ಚೇತನಾ ತೀರ್ಥಹಳ್ಳಿ
ಬೆಂಗಳೂರು: ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿಲಂಕೇಶ್ ಮಣ್ಣಲ್ಲಿ ಮಣ್ಣಾಗಿದ್ದಾರೆ, ಇಡೀ ದೇಶವೇ ಗೌರಿ ಲಂಕೇಶ್ ಸಾವಿಗೆ ಆಘಾತ ವ್ಯಕ್ತಪಡಿಸಿದೆ. ಈ ವೇಳೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪತ್ರಕರ್ತೆ ಚೇತನಾ ತೀರ್ಥಹಳ್ಳಿ ಗೌರಿ ಲಂಕೇಶ್ ಅವರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
'ಗೌರಿ ಲಂಕೇಶ್ ಅವರ ಹೆಸರನ್ನು ಮೊದಲ ಬಾರಿಗೆ ಕೇಳಿದಾಗ ನನಗೆ 16 ವರ್ಷ. ಅದು ನೀನಾಸಂ ನ ಸಾಂಸ್ಕೃತಿಕ ಶಿಬಿರದಲ್ಲಿ, ನೀನಾಸಂ ಅನ್ನು ಮಠ, ಹಾಗೂ ಬ್ರಾಹ್ಮಣ ಬುದ್ಧಿ ಜೀವಿಗಳ ಶಿಬಿರ ಎಂದು ಕರೆದರು. ಅಲ್ಲಿ ಕೇವಲ ಎರಡು ದಿನಗಳು ಇದ್ದ ಅವರು, ವಾಪಸಾದರು, ಅದು ನನಗೆ ಹೊಸತು. ಯು. ಆರ್ ಅನಂತಮೂರ್ತಿ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರನ್ನು ಪ್ರಶ್ನಿಸಲು ಇವರಿಗೆ ಎಷ್ಟು ಧೈರ್ಯ ಎದುಕೊಂಡೆ. ಸಪೂರವಾಗಿದ್ದ, ಸ್ಟೈಲಿಶ್ ಆದ ಬಟ್ಟೆ ತೊಟ್ಟಿದ್ದ ಆಕೆ ಗೌರಿ ಲಂಕೇಶ್ ಎಂದು ಆಗ ನನಗೆ ತಿಳಿಯಿತು'.
ದಶಕದ ನಂತರ ನಾನು ಆಕೆಯ ಹೆಸರನ್ನು ಮತ್ತೆ ಎರಡನೇ ಬಾರಿಗೆ ಕೇಳಿದೆ. ಅವರ ಜೊತೆ ಚರ್ಚೆಯಲ್ಲಿ ಆಗಾಗ್ಗೆ ಪಾಲ್ಗೋಳ್ಳುತ್ತಿದ್ದೆ. ಆ ವೇಳೆಗಳಲ್ಲಿ ನಾನು ಚಕ್ರವರ್ತಿ ಸೂಲಿಬೆಲೆ ಜೊತೆ ಇರುತ್ತಿದ್ದೆ, ಈ ಸಮಯದ ಚರ್ಚೆಯಲ್ಲಿ ನಾನು ಅವರ ವಿಚಾರಗಳ ವಿರುದ್ಧ ಮಾತನಾಡಿದರೇ, ನನ್ನನ್ನು ಗೌರಿ ಲಂಕೇಶ್ ಏಜೆಂಟ್ ಎಂದು ಕರೆಯುತ್ತಿದ್ದರು. ಚಕ್ರವರ್ತಿ ಸೂಲಿಬೆಲೆ ಬಲ ಪಂಥೀಯರಾಗಿದ್ದರು, ಆನಂತರ ನನಗೆ ತಿಳಿಯಿತು ನನ್ನ ದಾರಿ 'ಎಡಪಂಥ'ವೆಂದು. ಅವರೆಲ್ಲಾ ನನ್ನನ್ನು ಜ್ಯೂನಿಯರ್ ಗೌರಿ ಲಂಕೇಶ್ ಎಂದು ಕರೆಯುತ್ತಿದ್ದರು. ಬಲಪಂಥೀಯರೆಲ್ಲಾ ಗೌರಿ ಲಂಕೇಶ್ ಅವರ ಜೊತೆ ನನ್ನನ್ನು ಟ್ರಾಲ್ ಮಾಡಲು ಆರಂಭಿಸಿದರು. ನಾನು ಆಗ ವಯಸ್ಸಿನಲ್ಲಿ ಕಿರಿಯಳು ಮತ್ತು ಸಾಮಾಜಿಕ ಮಾಧ್ಯಮ ನನಗೆ ಹೊಸತು, ನಾನು ಮತ್ತು ಗೌರಿ ಅವರು ವಯಕ್ತಿಕವಾಗಿ ಎಂದು ಮಾತನಾಡಿರಲಿಲ್ಲ, ಬಲಪಂಥೀಯರು ನಾವಿಬ್ಬರೂ ತುಂಬಾ ಆಪ್ತರೆಂದು ಜನರಲ್ಲಿ ಭಾವನೆ ಮೂಡಿಸಿದರು.
ಇದು ನನ್ನ ಗುರುತಿಸುವಿಕೆಯ ಒಂದು ಭಾಗವಾಯಿತು, ಅದು ನನಗೆ ಸಂತೋಷವನ್ನುಂಟು ಮಾಡಿತು. ನಾನು ಗೌರಿ ಅವರ ಧೈರ್ಯವನ್ನು ಮೆಚ್ಚಿದೆ. ನನಗೆ ಅವರೊಂದಿಗೆ ಒಂದು ಅಪರೂಪದ ಸಂಬಂಧ ಬೆಳಿಯಿತು, ಒಂದು ಬಾರಿ ನನ್ನ ವಿರುದ್ಧ ಕೆಟ್ಟ ಲೇಖನ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ನಾನು ಗೌರಿ ಲಂಕೇಶ್ ಮತ್ತು ವರದಿಗಾರನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೆ. ಅದರಿಂದ ಅವರು ನನ್ನ ವಿರುದ್ಧ ಅಸಮಾಧಾನ ಗೊಂಡಿದ್ದರು, ನನಗೆ ಯಾವುದೇ ತೊಂದರೆ ಎದುರಾದರು ಅವರು ನನ್ನ ಜೊತೆಗೆ ನಿಲ್ಲುತ್ತಿದ್ದರು. ಗೌರಿ ಲಂಕೇಶ್ ಅವರ ದೇಹವನ್ನು ಅವರು ಕೊಂದಿರಬಹುದು, ಆದರೆ ನನ್ನೊಳಗಿರುವ ಗೌರಿಯನ್ನು ಅವರು ಕೊಲ್ಲಲಾರರು.