ರಾಜ್ಯ

ಆಸ್ತಿ ದಾಖಲೆ ವಿವರ ಸಲ್ಲಿಸದ ಮೂರು ಶಾಸಕರ ವಿರುದ್ಧ ರಾಜ್ಯಪಾಲರಿಗೆ ಲೋಕಾಯುಕ್ತ ವರದಿ

Shilpa D
ಬೆಂಗಳೂರು: ಆಸ್ತಿ ವಿವರದ ದಾಖಲೆ ಸಲ್ಲಿಸದ ಮೂವರು ಶಾಸಕರ ವಿರುದ್ಧ ಲೋಕಾಯಕ್ತ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ವರದಿ ಸಲ್ಲಿಸಿದೆ.
ಮಾಯಕೊಂಡ ಶಾಸಕ ಕೆ. ಶಿವಮೂರ್ತಿ, ವಿಧಾನ ಪರಿಷತ್ ಸದಸ್ಯ ಜೆಡಿಎಸ್ ನ ಆರ್ ಚೌಡರೆಡ್ಡಿ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಿಯು ಮಲ್ಲಿಕಾರ್ಜುನ ಅವರು ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ರಾಜ್ಯಪಲಾರಿಗೆ ಸೆಪ್ಟಂಬರ್ 4 ರಂದು ವರದಿ ಸಲ್ಲಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯಿದೆ ಪ್ರಕಾರ ಆಸ್ತಿ ವಿವರ ಸಲ್ಲಿಸದ ಮೂವರು ಶಾಸಕರ ಹೆಸರುಗಳನ್ನು ವೃತ್ತ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ  ಲೋಕಾ ನ್ಯಾಯಮೂರ್ತಿ ಶೆಟ್ಟಿ, ರಿಜಿಸ್ಚಾರ್ ಎಚ್.ಎಂ ನಂಜುಂಡಸ್ವಾಮಿ ಅವರಿಗೆ ಸೂಚಿಸಿದ್ದಾರೆ.
ಲೋಕಾಯುಕ್ತ ಕಾಯಿದೆ ಪ್ರಕಾರ ಪ್ರತಿಯೊಬ್ಬ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಿ ವರ್ಷ ಜೂನ್ 30 ರೊಳಗೆ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮವಿದೆ.
ಇನ್ನೂ ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಸೆಕ್ಷನ್ 176ರ ಅಡಿಯಲ್ಲಿ ದೂರು ದಾಖಲಿಸಲು ಅವಕಾಶವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.  ವಿವರ ಸಲ್ಲಿಸದ ಶಾಸಕರ ವಿರುದ್ಧ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಕ್ರಮ ಕೈಗೊಳ್ಳುವ ಅವಕಾಶವಿದೆ ಎಂದು ಹೇಳಿದ್ದಾರೆ.
SCROLL FOR NEXT