ಖ್ಯಾತ ಕಲಾವಿದ ಎಂ.ಬಿ ಪಾಟೀಲ್ 
ರಾಜ್ಯ

ಖ್ಯಾತ ಕಲಾವಿದ ಎಂಬಿ ಪಾಟೀಲ್ ಇನ್ನಿಲ್ಲ

ಹಿರಿಯ ಕಲಾವಿದ ಎಂ.ಬಿ.ಪಾಟೀಲ ಇಂದು ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

ಧಾರವಾಡ: ಹಿರಿಯ ಕಲಾವಿದ ಎಂ.ಬಿ.ಪಾಟೀಲ ಇಂದು ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.
ಮಲ್ಲಿಕಾರ್ಜುನಗೌಡ ಭೀಮನಗೌಡ ಪಾಟೀಲ  10 ಡಿಸೆಂಬರ್ 1939,ನಲ್ಲಿ ಬಿಜಾಪುರದ ತಿಕೋತಾ ಎನ್ನುವಲ್ಲಿ ಜನಿಸಿದರು. ನ್ಯೂಟನ್ ಕಲಾ ಮಂದಿರ, ಮುಂಬೈ ನಲ್ಲಿ 1960-1964 ರಲ್ಲಿ ಪದವಿ ಮುಗಿಸಿದ ಪಾಟೀಲರು ವಾರ್ತಾ ಇಲಾಖೆಯ ಮುಖ್ಯ ಕಲಾವಿದರಾಗಿ ನಿವೃಅತ್ತರಾಗಿದ್ದರು. ನಿವೃತ್ತಿಯ ನಂತರ  ಧಾರವಾಡದಲ್ಲಿ ನೆಲೆಸಿದ್ದರು. 
ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ, ಕಿತ್ತೂರು, ಬೆಂಗಳೂರಿನಲ್ಲಿ ಅವರು ಏಕವ್ಯಕ್ತಿ ಕಲಾ ಪ್ರದರ್ಶನಗಳನ್ನು ನೀಡಿದ್ದರು. ಮತ್ತು 1969 ರಿಂದ ಚೆನ್ನೈ, ಕೇರಳ, ಪಾಂಡಿಚೆರಿ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆದ ಆರ್ಟ್ ಕ್ಯಾಂಪ್ ಗಳಲ್ಲಿ ಸಹ ಪಾಲ್ಗೊಂಡಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಲಲಿತಕಲಾ ಅಕಾಡೆಮಿ, ಕೇಂದ್ರ ಹಾಗೂ ರಾಜ್ಯ ಚಿತ್ರಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿದೆ.
ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಸ್ತಬ್ಧ ಚಿತ್ರವನ್ನು, ಸತತ ಒಂಬತ್ತು ವರ್ಷ ಎಂ.ಬಿ.ಪಾಟೀಲ ಅವರೇ ವಿನ್ಯಾಸ ಮಾಡಿದ್ದರು. ಅವರು ವಿನ್ಯಾಸಗೊಳಿಸಿದ ಸ್ತಬ್ಧಚಿತ್ರಗಳಿಗೆ ಎರಡು ಬಾರಿ ಪ್ರಥಮ ಹಾಗೂ ಮೂರು ಬಾರಿ ದ್ವಿತೀಯ ಬಹುಮಾನ ಲಭಿಸಿದೆ. 
ಹಲವು ಪೌರಾಣಿಕ ಚಲನಚಿತ್ರಗಳಲ್ಲಿ ವಿನ್ಯಾಸಕಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT