ಗೌರಿ ಮತ್ತು ಇಂದ್ರಜಿತ್ ಲಂಕೇಶ್ 
ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ ಐಟಿಯಿಂದ ಸಹೋದರ ಇಂದ್ರಜಿತ್ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ಅಧಿಕಾರಿಗಳು ತಾಯಿ ಇಂದಿರಾ, ಸಹೋದರಿ ಕವಿತಾ ಮತ್ತು ಸಹೋದರ ಇಂದ್ರಜಿತ್ ...

ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ಅಧಿಕಾರಿಗಳು ತಾಯಿ ಇಂದಿರಾ, ಸಹೋದರಿ ಕವಿತಾ ಮತ್ತು ಸಹೋದರ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪತ್ರಿಕೆ ಒಡೆತನದ ವಿಷಯಕ್ಕೆ ಇಂದ್ರಜಿತ್ ಹಾಗೂ ಗೌರಿ ಲಂಕೇಶ್ ನಡುವೆ ಜಗಳವಾಗಿತ್ತು.ನಂತರ ಗೌರಿ ಲಂಕೇಶ್ ಗೆ 2005 ರಲ್ಲಿ ಪಿಸ್ತೂಲ್ ತೋರಿಸಿ ಇಂದ್ರಜಿತ್ ಬೆದರಿಕೆ ಹಾಕಿದ್ದರ ಸಂಬಂಧ ಅಧಿಕಾರಿಗಳು ಮಾಹಿತಿ ಪಡೆಯು ಮುಂದಾಗಿದ್ದಾರೆ. ನಡೆದು ಹೋದ ಘಟನೆ ಬಗ್ಗೆ ಮತ್ತೆ ನೆನಪಿಸಿದ್ದಕ್ಕೆ  ಇಂದ್ರಜಿತ್ ಅಧಿಕಾರಿಗಳ ವಿರುದ್ಧ ಕೂಗಾಡಿದ್ದಾರೆ. ಆದರೆ ತನಿಖಾಧಿಕಾರಿಗಳು ತಮ್ಮ ವಿಚಾರಣೆ ನಡೆಸಿದ ನಂತರ,  ಇದು ತಮ್ಮ ಕರ್ತವ್ಯದ ಒಂದು ಭಾಗ. ತನಿಖೆಗಾಗಿ ವಿವರ ಕೇಳಬೇಕಾಯಿತು ಎಂದು ವಿವರಣೆ ನೀಡಿದ್ದಾರೆ.
ಲೈಸೆನ್ಸ್ ಇರುವ ಗನ್ ಅನ್ನು ಹಾಜರು ಪಡಿಸುವಂತೆ ಅಧಿಕಾರಿಗಳು ಇಂದ್ರಜಿತ್ ಗೆ ಕೇಳಿದ್ದಾರೆ. ಅದನ್ನು ಬಹಳ ಹಿಂದೆಯೇ ಮಾರಾಟ ಮಾಡಿದ್ದಾಗಿ ಅಧಿಕಾರಿಗಳಿಗೆ ಇಂದ್ರಜಿತ್ ತಿಳಿಸಿದ್ದಾರೆ. ಮಾರಾಟ ಮಾಡಿರುವ ದಾಖಲಾತಿಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನೂ ಗೌರಿ ಲಂಕೇಶ್ ಹತ್ಯೆ ಸಂಬಂಧ  ಎಸ್ ಐಟಿ ಅಧಿಕಾರಿಗಳು ನಗರದ ಹೊಲವಲಯದ ರಿಯಲ್ ಎಸ್ಟೇಟ್ ಏಜೆಂಟ್ ಅರುಣ್ ಎಂಬಾತನನ್ನು ವಿಚಾರಣೆಗೊಳಪಡಿಸಿದ್ದಾರೆ. ನೆಲಮಂಗಲದ ಹೊರವಲಯದಲ್ಲಿರುವ ಆಸ್ತಿ ವಿವಾದ ಸಂಬಂಧ ಅರುಣ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸತತ ಐದು ಗಂಟೆ ವಿಚಾರಣೆ ನಂತರ ಹತ್ಯೆ ಪ್ರಕರಣಕ್ಕೂ ಅರುಣ್ ಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿರುವ ಇಂದ್ರಜಿತ್, ಕೆಲ ವಿಷಯಗಳಲ್ಲಿ ನನ್ನ ಮತ್ತು ಗೌರಿ ನಡುವೆ ಭಿನ್ನಾಭಿಪ್ರಾಯಗಳಿತ್ತು.  ಎಲ್ಲಾ ಕುಟುಂಬಗಳಲ್ಲಿರುವಂತೆ ನಮ್ಮಲ್ಲೂ ಜಗಳವಿತ್ತು, ನಂತರ ಸರಿಯಾಯಿತು.  ಕೌಟುಂಬಿಕ ಸಮಾರಂಭಗಳಲ್ಲಿ ನಾವಿಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದೆವು, ನನ್ನ ಸಹೋದರಿ ಜೊತೆ ನನಗೆ ವಿಶೇಷ ಸಂಬಂಧವಿತ್ತು. ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ, ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಇಂದ್ರಜಿತ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!