ಬೆಂಗಳೂರು: 18ನೇ ಮಹಡಿಯಿಂದ ಜಿಗಿದು 17 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ವೈಟ್ ಪೀಲ್ಡ್ ನಲ್ಲಿ ನಡೆದಿದೆ.
ಪೋಲ್ಲಾಸ್ ಚೌಧರಿ(17) ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪ್ರವೀಣ್ ಚೌದರಿ ಎಂಬುವವರ ಪುತ್ರನಾಗಿದ್ದು, ವರ್ತೂರುನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತನ ತಂದೆ ಸಾಫ್ಟ್ ವೇರ್ ಎಂಜಿನೀಯರ್ ಆಗಿದ್ದರು.
ಕಳೆದ ರಾತ್ರಿ 3.30 ರ ವೇಳೆಗೆ ಪೋಲ್ಲಾಸ್ ಚೌದರಿ ತನ್ನ ಖಾಸಗಿ ವಿಲ್ಲಾದಿಂದ ಶಾಂತಿನಿಕೇತನ್ ಅಪಾಟ್ರ್ಮೆಂಟ್ನಲ್ಲಿ ಇರುವ ತನ್ನ ಸ್ನೇಹಿತೆ ಮನೆಗೆ ಹೋಗಿದ್ದ. ತನ್ನ ಸ್ನೇಹಿತೆಗೆ ಫೋನ್ ಮಾಡಿ ಅಪಾರ್ಟ್ಮೆಂಟ್ ಒಳಗೆ ಬಿಡುವಂತೆ ಸೆಕ್ಯುರಿಟಿಗೆ ಹೇಳು ಎಂದು ಹೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್ ಬಳಿ ಎಂಟ್ರಿ ಮಾಡಿದ ಪೋಲ್ಲಾಸ್ ನೇರವಾಗಿ 18ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಬೆಳಗಿನ ಜಾವ ಸುಮಾರು 6ಗಂಟೆಗೆ ಟೆರೇಸ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಪೊಲ್ಲಾಸ್ ತನ್ನೆಲ್ಲಾ ಸ್ನೇಹಿತರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದ.
ಸ್ನೇಹಿತೆ ಮತ್ತು ಆತನ ನಡುವೆ ದೀರ್ಘಕಾಲದ ವರೆಗೆ ವಾದ ವಿವಾದ ನಡೆದಿದ್ದು, ನೀನಲ್ಲದೇ ನನ್ನ ಬದುಕಿಗೆ ಅರ್ಥವಿಲ್ಲ, ಯಾರೋಬ್ಬರು ನಿನ್ನನ್ನು ನನ್ನಷ್ಟು ಪ್ರೀತಿ ಮಾಡುವುದಿಲ್ಲ, ಇದೇ ನನ್ನ ಕೊನೆಯ ಮೆಸೇಜ್ ಎಂದು ಕಳುಹಿಸಿದ್ದಾನೆ, ಇದೇ ಮೆಸೇಜ್ ಅನ್ನು ಆತ ತನ್ನ ಕಾಮನ್ ಫ್ರೆಂಡ್ಸ್ ಗೂ ಕಳುಹಿಸಿದ್ದಾನೆ. ಮೇಲಿಂದ ಬಿದ್ದ ಶಬ್ದ ಕೇಳಿದ ನಿವಾಸಿಗಳು ಸೆಕ್ಯೂರಿಟಿ ಗಾರ್ಡ್ ಗೆ ವಿಷಯ ತಿಳಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕುಟುಂಬ ವರ್ಗದವರು ಹಾಗೂ ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics