ಬೆಂಗಳೂರು: ಗೋವಾದಲ್ಲಿ ಕನ್ನಡಿಗರ ಮನೆಗಳ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಮುಖ್ಯಮಂತ್ರಿ ತಾವು ಕನ್ನಡಿಗರ ಮನೆ ನೆಲಸಮಗೊಳಿಸಿದ ವಿಚಾರದಲ್ಲಿ ಗೋವಾಗೆ 'ಖಡಕ್' ಪತ್ರ ಬರೀಯುವುದಾಗಿ ಹೇಳಿದರು.
ಗೋವಾದ ಬೈನಾ ಬೀಚ್ ನಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ಜೀವನ ನಡೆಸಿದ್ದ ಕನ್ನಡಿಗರ ಮನೆಗಳನ್ನು ಅಲ್ಲಿನ ಸರ್ಕಾರ ನೆಲಸಮಗೊಳಿಸಿತ್ತು. ನಿನ್ನೆ ಜೆಸಿಬಿ ಯಂತ್ರಗಳನ್ನು ತರಿಸಿದ ಸ್ಥಳೀಯ ಜಿಲ್ಲಾಡಳಿತ 55 ಮನೆಗಳನ್ನು ಒಡೆದು ಹಾಕಿತ್ತು.