ಬೆಂಗಳೂರು:ಕರ್ನಾಟಕದಲ್ಲಿ ಶೇ. 23.2 ರಷ್ಟು ಜನ ಬಾಲ್ಯ ವಿವಾಹ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(ಕಎಸ್ ಸಿಪಿಸಿಆರ್) ಪ್ರಕಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ಇಂದಿಗೂ ಪ್ರಚಲಿತದಲ್ಲಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(ಕಎಸ್ ಸಿಪಿಸಿಆರ್), ವರ್ಲ್ಡ್ಶ್ ವಿಷನ್, ಯುನಿಸೆಫ್ ಮತ್ತು ಮಕ್ಕಳ ಹಕ್ಕುಗಳ ಸಂಘಟನೆಗಳು ಭಾಗವಹಿಸಿದ್ದ ಬಾಲ್ಯ ವಿವಾಹವನ್ನು ಕೊನೆಗೊಳಿಸುವಿಕೆ ಕುರಿತ ರಾಜ್ಯ ಮಟ್ಟದ ಸಮಾವೇಶದಲ್ಲಿ ಈ ಅಂಶ ಬಹಿರಂಗಗೊಂಡಿದೆ.
ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ಸಾಮಾಜಿಕ ಪಿಡುಗನ್ನು ನಿಗ್ರಹಿಸಲು ಇನ್ನೂ ಹೆಚ್ಚು ಪರಿಣಾಮಕಾರಿಯಾದ ನೀತಿಗಳ ಅನುಷ್ಠಾನ ಮತ್ತು ಈಗಾಗಲೇ ಜಾರಿಯಲ್ಲಿರುವ ಕಾನೂನನ್ನು ೈನ್ನಷ್ಟು ಬಲಪಡಿಸುವ ಕುರಿತು ಅವರು ಸಭೇಯಲ್ಲಿ ಚರ್ಚಿಸಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ(ಕಎಸ್ ಸಿಪಿಸಿಆರ್) ಅಧ್ಯಕ್ಷೆ ಡಾ. ಕೃಪಾ ಆಳ್ವಾ, "ಈ ಪಿಡುಗು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಿಸಿದೆ, ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳಲು ನಾವು ಕಾನೂನು ಚೌಕಟ್ಟನ್ನು ಇನ್ನಷ್ಟು ಬಲಪಡಿಸಬೇಕಿದೆ " ಎಂದಿದ್ದಾರೆ
ಕಎಸ್ ಸಿಪಿಸಿಆರ್, ಪ್ರಕಾರ, ಉತ್ತರ ಕರ್ನಾಟಕ ಭಾಗದಲ್ಲಿ ಬಾಲ್ಯ ವಿವಾಹ ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆದೆ, ಯಾದಗಿರಿ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಮತ್ತು ಕಲ್ಬುರ್ಗಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ. ರಾಜ್ಯದಿಂದ ಬಾಲ್ಯ ವಿವಾಹ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕರ್ನಾಟಕ ಐದು ವರ್ಷಗಳ ಗುರಿಯನ್ನು ಹಾಕಿಕೊಂಡಿದೆ.
ವಿಶ್ವ ವಿಷನ್ ಇಂಡಿಯಾ ದ ಹಿರಿಯ ವ್ಯವಸ್ಥಾಪಕ ಮಥಾಯ್ ಕುಟ್ಟಿ, "ಹಲವು ಸಂದರ್ಭಗಳಲ್ಲಿ, ಬಾಲ್ಯ ವಿವಾಹದ ನಂತರ, ಹೆಣ್ಣು ಮಗು ವಯಸ್ಕ ಮಹಿಳೆಯ ಪಾತ್ರವನ್ನು ಚಿಕ್ಕ ವಯಸ್ಸಿನಲ್ಲೇ ವಹಿಸಬೇಕಾಗುತ್ತದೆ. ಬಾಲ್ಯ ವಿವಾಹವು ಮಗುವಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹಕ್ಕೊಳಗಾದ ಹೆಣ್ಣು ಮಗು ಗರ್ಭ ಧರಿಸಿದರೆ ಹೆರಿಗೆ ನಡೆಸುವುದು ಬಹಳ ಕಠಿಣವಾಗುತ್ತದೆ" ಎಂದು ಅಭಿಪ್ರಾಯ ಪಟ್ಟರು.