ರಾಜ್ಯ

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ಮಧ್ಯೆ ಮೆಟ್ರೊ ಸಂಪರ್ಕಕ್ಕೆ ಸಿದ್ಧತೆ

Sumana Upadhyaya
ಬೆಂಗಳೂರು: ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 29 ಕಿಲೋ ಮೀಟರ್ ವರೆಗೆ 5,900 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೊ ರೈಲು ಸಂಪರ್ಕ ಕಾಮಗಾರಿ ಆರಂಭವಾಗಲಿದೆ. ವಿವರವಾದ ಯೋಜನೆ ವರದಿ(ಡಿಪಿಆರ್)ಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ತಯಾರಿಸಿದ್ದು ಮುಖ್ಯಮಂತ್ರಿಗಳ ಒಪ್ಪಿಗೆಗಾಗಿ ನಿನ್ನೆ ಸಲ್ಲಿಸಲಾಯಿತು.
ಈ ಮೆಟ್ರೊ ಮಾರ್ಗಗಲ್ಲಿ 6 ನಿಲ್ದಾಣಗಳಿದ್ದು, ಎರಡು ನಿಲ್ದಾಣಗಳು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದೊಳಗೆ ಇರಲು ವಿಮಾನ ನಿಲ್ದಾಣ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನಮ್ಮ ಮೆಟ್ರೊದ ಎರಡನೇ ಹಂತದ ಕಾಮಗಾರಿಯಲ್ಲಿ ಗೊಟ್ಟಿಗೆರೆ-ನಾಗಾವರ ಮಾರ್ಗದ ಎರಡನೇ ಹಂತದಲ್ಲಿ ಹೆಗ್ಡೆ ನಗರ, ಜಕ್ಕೂರು,ಯಲಹಂಕ ಮತ್ತು ಚಿಕ್ಕಜಾಲದಲ್ಲಿ ರೈಲು ನಿಲುಗಡೆಯಾಗಲಿದೆ. 
ಮುಖ್ಯಮಂತ್ರಿಯವರ ಒಪ್ಪಿಗೆ ಸಿಕ್ಕಿದ ನಂತರ ವರದಿಯನ್ನು ಮುಂದಿನ ವಾರ ಸಂಪುಟ ಸಭೆ ಮುಂದಿಡಲಾಗುತ್ತದೆ. ಇದಕ್ಕೆ ಸುಮಾರು 4,000 ಕೋಟಿ ರೂಪಾಯಿ ವೆಚ್ಚ ತಗಲಬಹುದು ಎಂದು ಈ ಮುನ್ನ ಅಂದಾಜಿಸಲಾಗಿತ್ತು. ಭೂ ಸ್ವಾದೀನ ಪ್ರಕ್ರಿಯೆ ಭಾಗವಾಗಿ ಪರಿಶೀಲಿಸಿದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದಿಂದ ಅತಿ ಹೆಚ್ಚು ಭೂಮಿ ಪಡೆದುಕೊಳ್ಳುವುದರಿಂದ ಖಾಸಗಿಯಾಗಿ ಹೆಚ್ಚಿನ ಭೂಮಿ ಪಡೆಯಬೇಕಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
SCROLL FOR NEXT