ರಾಜ್ಯ

ಬೆಂಗಳೂರು: ಉಚಿತ ರೇಷನ್‌ ಕೂಪನ್‌ ಗಾಗಿ ನೂಕು ನೂಗ್ಗಲು; ಇಬ್ಬರು ಸಾವು

Lingaraj Badiger
ಬೆಂಗಳೂರು: ರಂಜಾನ್‌ ಹಬ್ಬಕ್ಕೆ ಉಚಿತ ರೇಷನ್ ಕೂಪನ್ ಪಡೆಯುವ ವೇಳೆ ನೂಕೂ ನೂಗ್ಗಲು ಉಂಟಾಗಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಯಲಹಂಕ ಸಮೀಪದ ಮಿಟ್ಟಗಾನಹಳ್ಳಿಯಲ್ಲಿ ಗುರುವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಗಳನ್ನು ರೆಹಮತ್ ಉನ್ನೀಸಾ (65) ಮತ್ತು ಅನ್ವರ್ ಪಾಷಾ(75) ಎಂದು ಗುರುತಿಸಲಾಗಿದೆ. 
ಶಿವಾಜಿನಗರ ನಿವಾಸಿ ಯೂಸಫ್ ಎಂಬಾತ ಮುಸ್ಲಿಂ ಬಾಂಧವರಿಗೆ ಮುಂದಿನ ರಂಜಾನ್‌ ಹಬ್ಬಕ್ಕೆ ಅಂತ ಉಚಿತ ಕೂಪನ್ ವಿತರಿಸಲು ವಾಟ್ಸಪ್ ಮುಖಾಂತರ ಎಲ್ಲರಿಗೂ ಸಂದೇಶ ನೀಡಿದ್ದ. ಯೂಸಫ್ ಅವರು ಪ್ರತಿ ವರ್ಷ ರಂಜಾನ್ ತಿಂಗಳ ಮುನ್ನ ಬಡವರಿಗೆ ರೇಷನ್ ದಾನ ಮಾಡುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ರೇಷನ್ ಗಾಗಿ ಉಚಿತ ಕೂಪನ್ ಪಡೆಯಲು ತಮ್ಮ ಚೌಟ್ರಿಗೆ ಬರುವಂತೆ ಜನರಿಗೆ ತಿಳಿಸಿದ್ದರು. ಇದ್ರಿಂದಾಗಿ ಯಲಹಂಕ ಬಳಿಯ ಮಿಟಗಾನಹಳ್ಳಿಗೆ ಕಳೆದ ರಾತ್ರಿಯೇ ಬೆಂಗಳೂರು, ತೂಮಕೂರು, ಚಿಕ್ಕಬಳ್ಳಾಪುರ ನೆರೆಯ ಆಂಧ್ರ ಹಾಗೂ ಕೇರಳದಿಂದ ಮುಸ್ಲಿಂ ಬಾಂಧವರು ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಕೂಪನ್ ವಿತರಿಸಲು ಪ್ರಾರಂಭ ಮಾಡಲಾಗಿದ್ದು, ಸರತಿ ಸಾಲಿನಲ್ಲಿ ನಿಂತಿದ್ದ ಜನರಿಂದ ನೂಕುನೂಗ್ಗಲು ಉಂಟಾಗಿದೆ. 
ಈ ವೇಳೆ ರೆಹಮತ್ ಉನ್ನೀಸಾ ಹಾಗೂ ಅನ್ವರ್ ಪಾಷಾ ಎಂಬಾತರು ನೂಕೂನುಗ್ಗಲಿನಿಂದ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಾಗಲೂರು ಪೊಲೀಸರು ಭೇಟಿ ನೀಡಿ ಮೃತರ ಶವಗಳನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಯೂಸಫ್ ಚೌಟ್ರಿಯ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
SCROLL FOR NEXT