ಬೆಂಗಳೂರು: ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಸಮಿತಿಗಳನ್ನು ರಚಿಸುವ ಮೂಲಕ ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ನಲ್ಲಿ ಪ್ರಯತ್ನಗಳು ಪ್ರಾರಂಭವಾಗಿದೆ.
ಸಪ್ಟೆಂಬರ್ ನಲ್ಲಿ ಬೂತ್ ಮಟ್ಟದ ಸಮಿತಿಗಳನ್ನು ರಚಿಸುವ ಪ್ರಕ್ರಿಯೆ ಕೇವಲ 60 ಪ್ರತಿಶತದಷ್ಟು ಪ್ರಗತಿಯನ್ನು ಸಾಧಿಸಿದೆ. ಇಷ್ಟರಲ್ಲಾಗಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಸಲು ಉದ್ದೇಶಿಸಿರುವ ಬೂತ್ ಏಜೆಂಟ್ಸ್ ಕನ್ವೆನ್ಷನ್ ವರೆಗೆ ಯೋಜನೆಯನ್ನು ಮುಂದೂದಲು ಕೆಪಿಸಿಸಿ ನಿರ್ಧರಿಸಿದೆ..
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕದಲ್ಲಿ ಪಕ್ಷದ ವ್ಯವಹಾರಗಳ ಹೊಣೆಗಾರಿಕೆ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್, 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಕಾರ್ಯತಂತ್ರದ ರೂಪಿಸಿದ್ದಾರೆ. ರಾಜ್ಯದ ಎಲ್ಲಾ 55,000 ಮತಗಟ್ಟೆಗಳಿಗೆ ಬೂತ್ ಸಮಿತಿಗಳನ್ನು ರಚಿಸುವುದು ಅವರ ಕಾರ್ಯಸೂಚಿಯಲ್ಲಿ ಸೇರಿದೆ.
ಆಗಸ್ಟ್ ಮಧ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಈ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಮಧ್ಯಭಾಗದಲ್ಲಿ ಪೂರ್ಣಗೊಳಿಸಬೇಕೆಂದು ಆದೇಶಿಸಿದ್ದರು.. ಸೆಪ್ಟೆಂಬರ್ ಅಂತ್ಯದ ವೇಳೆಗೆ ಬೂತ್ ಏಜೆಂಟರ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಬೂತ್ ಸಮಿತಿಗಳ ರಚನೆಯು ಮಂದಗತಿಯಲ್ಲಿ ಸಾಗುತ್ತಿರುವ ಕಾರಣ, ರಾಹುಲ್ ಅವರ ರ್ಯಾಲಿ ಅಕ್ಟೋಬರ್ ಮಧ್ಯದಲ್ಲಿ ನಡೆಯಲಿದೆ. "ಉತ್ತರ ಕರ್ನಾಟಕದ ಬೂತ್ ಸಮಿತಿಗಳ ರಚನೆಯು ಶೇ. 80 ರಷ್ಟು ಬೂತ್ ಗಳಲ್ಲಿ ಪೂರ್ಣಗೊಂಡಿದೆ. ಪ್ರತಿಯೊಂದು ಸಮಿತಿಯು 13 ರಿಂದ 20 ಸದಸ್ಯರನ್ನು ಹೊಂದಿರುತ್ತದೆ. ಪಕ್ಷವು ಈಗ 'ಮನೆ ಮನೆಗೆ ಕಾಂಗ್ರೆಸ್' ಪ್ರಚಾರದಲ್ಲಿ ತೊಡಗಿದೆ, "ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್. ಆರ್. ಪಾಟೀಲ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos