ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಗರ್ಭಿಣಿಯಾಗದ ಪತ್ನಿಗೆ ಅಶ್ಲೀಲ ಸಿನಿಮಾ ತೋರಿಸಿ ವೈದ್ಯ ಪತಿಯಿಂದ ಕಿರುಕುಳ

ಪತ್ನಿ ಗರ್ಭಿಣಿಯಾಗಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ವೈದ್ಯ ಪತಿ ವಿರುದ್ಧ ದೂರು ದಾಖಲಾಗಿದೆ....

ಸಾಂದರ್ಭಿಕ ಚಿತ್ರ
Shilpa D
Updated On : 4 Apr 2018, 12:01 pm
ಬೆಂಗಳೂರು: ಪತ್ನಿ ಗರ್ಭಿಣಿಯಾಗಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ವೈದ್ಯ ಪತಿ ವಿರುದ್ಧ ದೂರು ದಾಖಲಾಗಿದೆ.
ಈ ಸಂಬಂಧ ನೊಂದ ಪತ್ನಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆದರೆ ಪ್ರಕರಣ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ದೂರನ್ನು ದಾವಣಗೆರೆ ಮಹಿಳಾ ಪೊಲೀಸ್ ಠಾಣಗೆ ವರ್ಗಾಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯ ಡಾ. ಮಂಜುನಾಥ್ ವಿರುದ್ಧ ವರದಕ್ಷಿಣೆ ಕೇಸು ದಾಖಲಿಸಲಾಗಿದೆ, ಮಂಜುನಾಥ್ ಪತ್ನಿ ಆತನಿಗಿಂತ 15 ವರ್ಷ ವಯಸ್ಸಿನಲ್ಲಿ ಕಿರಿಯವರಾಗಿದ್ದಾರೆ, ಮದುವೆಯಾಗಿ ಮೂರು ವರ್ಷವಾದರೂ ಗರ್ಭಿಣಿಯಾಗದ ಹಿನ್ನೆಲೆಯಲ್ಲಿ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಜೊತೆಗೆ ಆಕೆಗೆ ಮಂಜುನಾಥ್ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಡ ಹಾಕುತ್ತಿದ್ದ ಎಂದು ಹೇಳಲಾಗಿದೆ, ಆದರೆ ಈ ಎಲ್ಲಾ ಆರೋಪಗಳನ್ನು ಮಂಜುನಾಥ್ ನಿರಾಕರಿಸಿದ್ದಾರೆ.

Advertisement

Advertisement

ಇನ್ನೂ ಪತ್ನಿಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಮಂಜುನಾಥ್ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸಕು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement