ರಾಜ್ಯ

ಸಿದ್ದರಾಮಯ್ಯ, ರಾಹುಲ್ ಗಾಂಧಿ ಮಿಮಿಕ್ರಿ ಮಾಡಿದ್ದ ಕಲಾವಿದ ಅಮಾನತು!

Shilpa D
ಮಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಿಮಿಕ್ರಿ ಮಾಡಿದ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾವಿದರನ್ನು ಅಮಾನತು ಮಾಡಲಾಗಿದೆ.
ಯಕ್ಷಗಾನದಲ್ಲಿ ರಾಜಕೀಯ ಪ್ರೇರಿತ ಪದವನ್ನು ಬಳಕೆ ಮಾಡಿದ್ದಕ್ಕೆ ಕಟೀಲು ಮೇಳದ ಹಾಸ್ಯ ಕಲಾವಿದನನ್ನು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ.
ಏಪ್ರಿಲ್ 1 ರಂದು ಕೇರಳದ ಪಡುಮರ್ನಾಡ್ ಬಳಿಯ ಬನ್ನಡ್ಕ ದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ಯ ಪ್ರಸಂಗದ ಒಂದು ಸನ್ನಿವೇಶದಲ್ಲಿ “ಇವನರ್ವ, ಇವನರ್ವ” ಎಂದು ಡೈಲಾಗ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು.
ಗ್ರಾಮಸ್ಥರೊಬ್ಬ ಇದನ್ನು ಪ್ರಶ್ನಿಸಿ ಮೂಡಬಿದಿರೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ಪ್ರಸನ್ನ ಕಟೀಲು ದೇವಾಲಯ ಟ್ರಸ್ಟಿ ಅತ್ರಣ್ಣ ಅವರಿಗೆ ನೋಟಿಸ್ ನೀಡಿದ್ದರು. ಟ್ರಸ್ಟಿ ಅತ್ರಣ್ಣ ಕಲಾವಿದ ಪೂಣಚ್ಚ ಅವರನ್ನು ಅಮಾನತುಗೊಳಿಸಿದ್ದಾರೆ. ಪೂಣಚ್ಚ ಸರ್ಕಾರಿ ಉದ್ಯೋಗಿಯಾಗಿದ್ದು, ದತ್ತಿ ಇಲಾಖೆಯಿಂದ ವೇತನ ಪಡೆಯುತ್ತಿದ್ದಾರೆ. 
ಚುನಾವಣಾ ಆಯೋಗದ ಕ್ರಮಕ್ಕೆ ಕಲಾವಿದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪೂಣಚ್ಚ ಅವರು ಕೇರಳ ರಾಜ್ಯದ ಕಾಸರಗೋಡುವಿನ ಮಾನ್ಯದಲ್ಲಿ ನಡೆದ ಪ್ರದರ್ಶನದ ವೇಳೆ ಈ ಡೈಲಾಗ್ ಹೇಳಿದ್ದಾರೆ. ಹೀಗಾಗಿ ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಇವನರ್ವ ಪದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.
SCROLL FOR NEXT