ರಾಜ್ಯ

ರಾಹುಲ್, ಸಿಎಂ ಸಿದ್ದು ಕುರಿತು ಮಿಮಿಕ್ರಿ: ಯಕ್ಷಗಾನ ಮೇಳಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಚುನಾವಣಾ ಆಯೋಗ

Manjula VN
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಯಾಗಿದ್ದ ಚುನಾವಣಾ ನೀತಿ ಸಂಹಿತೆ ಈಗ ಪ್ರಸಂಗಗಳ ಸಂಭಾಷಣೆಗೂ ತಟ್ಟಿದೆ. ಇಧರ ಪರಿಣಾಮ ಯಕ್ಷಗಾನ ಮೇಳದ ಪ್ರಧಾನ ಹಾಸ್ಯ ಕಲಾವಿದರೊಬ್ಬರು ಮೇಳದಿಂದಲೇ ಅಮಾನತುಗೊಂಡಿದ್ದರು. ಯಕ್ಷಗಾನ ಮೇಳದ ವ್ಯವಸ್ಥಾಪಕರು ಸ್ಪಷ್ಟೀಕರಣ ನೀಡಿದ ಬಳಿಕ ಚುನಾವಣಾಧಿಕಾರಿಗಳು ಅಮಾನತನ್ನು ಹಿಂದಕ್ಕೆ ಪಡೆದಿದ್ದಾರೆ. 
ಯಕ್ಷಗಾನ ಬಯಲಾಟ ಪ್ರದರ್ಶನದ ಸಂಭಾಷಣೆಯಲ್ಲಿ ಇವನರ್ವ... ಇವನರ್ವ... ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣದ ಸಾಲನ್ನು ಹಾಸ್ಯ ಮಾಡಿದ್ದರು. ಎನ್ನಲಾದ ಹಾಸ್ಯಕಲಾವಿದರೊಬ್ಬರನ್ನು ಚುನಾವಣಾಧಿಕಾರಿಗಳು ಮೇಳದಿಂದಲೇ ಮನೆಗೆ ಕಳುಹಿಸಿದ್ದ ಘಟನೆ ಮಂಗಳೂರಿನಲ್ಲಿ ಸೋಮವಾರ ನಡೆದಿತ್ತು. 
ಆದರೆ, ಈ ಯಕ್ಷಗಾನ ಪ್ರಸಂಗ ನಡೆದಿದ್ದು ಕರ್ನಾಟದಲ್ಲಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರದ ನೆರೆಯ ಕೇರಳದ ಕಾಸರಗೋಡಿನಲ್ಲಿ ಎಂದು ಮೇಳದ ವ್ಯವಸ್ಥಾಪಕರು ಸ್ಪಷ್ಟೀಕರಣ ನೀಡಿದ ಬಳಿಕ ಬುಧವಾರ ಅಮಾನತು ಆದೇಸವನ್ನು ಹಿಂದಕ್ಕೆ ಪಡೆದಿದ್ದು, ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. 
SCROLL FOR NEXT