ಬೆಂಗಳೂರು: ದೇಶದಲ್ಲಿನ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ರಾಯಚೂರು ( 12 ) ಯಾದಗಿರಿ (40) ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಅತಿ ಹಿಂದುಳಿದ ಜಿಲ್ಲೆಗಳು ಎಂದು ಘೋಷಿಸಲ್ಪಟ್ಟಿವೆ.
ಅಭಿವೃದ್ದಿ ಕಾರ್ಯಸೂಚಿಗಳಲ್ಲಿ ರಾಯಚೂರು ಶೇ. 43. 53 ರಷ್ಟು ಅಂಕ ಪಡೆದಿದ್ದರೆ, ಯಾದಗಿರಿ ಶೇ. 37. 1 ರಷ್ಟು ಅಂಕ ಪಡೆದಿದೆ . ಆರೋಗ್ಯ, ಪೌಷ್ಠಿಕಾಂಶ, ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಮೂಲ ಸೌಕರ್ಯ, ಆರ್ಥಿಕ ಒಳ್ಳಗೊಳ್ಳುವಿಕೆ, ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿನ 49 ಅಂಶಗಳ ಆಧಾರದ ಮೇಲೆ ನೀತಿ ಆಯೋಗ ಜಿಲ್ಲೆಗಳ ಪ್ರಗತಿಯನ್ನು ನಿರ್ವಹಣೆ ಮಾಡುತ್ತದೆ.
ಏ. 1 ರಿಂದ ಜಿಲ್ಲೆಗಳು ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸುತ್ತವೆ. ಕಾಲಕ್ಕೆ ತಕ್ಕಂತೆ ಪ್ರಗತಿಯಲ್ಲಿನ ಆಧಾರದ ಮೇಲೆ ಕ್ರಮಾಂಕವನ್ನು ನೀಡಲಾಗುತ್ತದೆ. ಮಕ್ಕಳ ಬೆಳವಣಿಗೆ, ಸಾಂಕ್ರಾಮಿಕ ರೋಗಗಳು, ಮತ್ತು ಆರೋಗ್ಯ ಮೂಲಸೌಕರ್ಯ ಮತ್ತಿತರ ಆರೋಗ್ಯ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ವಿಷಯಗಳೇ ಶೇ. 30 ರಷ್ಟು ಅಂಕಗಳನ್ನು ಹೊಂದಿರುತ್ತವೆ.
ನಾಲ್ಕು ವರ್ಷಗಳ ನಂತರ ಪ್ರಗತಿಯಾಗಿದೆ. ರಾಜ್ಯದಲ್ಲಿ ಶೇ. 72 ರಷ್ಟು ಶಿಕ್ಷಣಮಟ್ಟವಿದ್ದರೆ ಯಾದಗಿರಿಯಲ್ಲಿ ಶೇ. 51 ರಷ್ಟು ಶಿಕ್ಷಣಮಟ್ಟ ಹೆಚ್ಚಾಗಿದೆ. ಪಂಜಾಬಿಗಿಂತಲೂ ಇಲ್ಲಿ ಹೆಚ್ಚು ಗುಣಮಟ್ಟದ ಅಕ್ಕಿಯನ್ನು ಉತ್ಪಾದಿಸಲಾಗುತ್ತಿದೆ ಎಂದು ಯಾದಗಿರಿಯ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.