ರಾಜ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಶ್ವಾನದಳದಿಂದ ವನ್ಯಜೀವಿ ಅಪರಾಧ ತಪಾಸಣೆ

Nagaraja AB

ಬೆಂಗಳೂರು : ವನ್ಯಜೀವಿ ಅಪರಾಧವನ್ನು ಪತ್ತೆ ಹಚ್ಚುವ ಸಲುವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ವಾನದಳವನ್ನು  ನಿಯೋಜಿಸಲಾಗುತ್ತಿದೆ.

ದೇಶದ ವಿಮಾನ ನಿಲ್ದಾಣಗಳ ಪೈಕಿ ಇದೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರ  ಇಂತಹ ಪ್ರಯತ್ನಕ್ಕೆ ಮುಂದಾಗಿದೆ.

 ಬೆಂಗಳೂರು ಗ್ರಾಮಾಂತರ ವಿಭಾಗ ಎರಡು ತಂಡಗಳನ್ನು  ಮಧ್ಯಪ್ರದೇಶ ಮತ್ತು ಭೂಪಾಲ್ ನಲ್ಲಿನ  23 ನೇ ಬೆಟಲಿಯನ್ ವಿಶೇಷ ಶಸ್ತ್ರಾಸ್ತ್ರ ಪಡೆಯ ಪೊಲೀಸ್ ಶ್ವಾನ ತರಬೇತಿ ಕಂದ್ರಕ್ಕೆ ಕಳುಹಿಸಲಾಗುತ್ತಿದೆ.

 ಈ ತರಬೇತಿ ಮುಗಿದ ನಂತರ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗುತ್ತಿದೆ.  ಆಮೆ, ಪಕ್ಷಿ, ಅಪರೂಪದ  ಔಷಧೀಯ ಸಸ್ಯಗಳು, ಶ್ರೀಗಂಧ ಮರ ಮತ್ತಿತರ ವನ್ಯಜೀವಿಗಳ ಸಾಗಾಟವನ್ನು ತಡೆಗಟ್ಟುವುದು ಇದರ ಪ್ರಮುಖ ಉದ್ದೇಶವಾಗಿದೆ.

ವನ್ಯಜೀವಿ ಮಾರಾಟ ನಿರ್ವಣೆಯ ತಡೆ ಸದಸ್ಯರು ಶ್ವಾನ ದಳ ನಿಯಂತ್ರಣದ  ಹೊಣೆ ತೆಗೆದುಕೊಂಡಿದ್ದು, ಶ್ವಾನದಳ ನಿಯೋಜಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ.  ಕಳೆದ ಮೂರು ವರ್ಷಗಳಲ್ಲಿ 200 ವನ್ಯಜೀವಿಗಳ ಕಳ್ಳವ್ಯಾಪಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವನ್ಯಜೀವಿ ಕಳ್ಳಸಾಗಣೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಹದಾರಿಯಾಗಿದ್ದು, ಇಲ್ಲಿಂದ ಮಲೇಷಿಯಾ, ಸಿಂಗಾಪುರ್, ಥೈಲ್ಯಾಂಡ್, ನೇಪಾಳ,  ದುಬೈ ಮತ್ತಿತರ ರಾಷ್ಟ್ರಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 ಪ್ರಸ್ತುತ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಬಂಡಿಪುರ ಹುಲಿ ಸಂರಕ್ಷಣಾ ಮತ್ತು ಡಾಂಡೇಲಿಯ ಕಾಳಿ ಹುಲಿ ಸಂರಕ್ಷಣಾ ವಲಯದಲ್ಲಿ ಶ್ವಾನದಳ ಎರಡು ತುಕಡಿಯನ್ನು ನಿಯೋಜಿಸಲಾಗಿದೆ.

  ಕೊಳ್ಳೇಗಾಲದ ಭದ್ರಾ ಮತ್ತು ಬಿಆರ್ ಟಿ ಸಂರಕ್ಷಿತ ಅರಣ್ಯದಲ್ಲಿಯೂ ಶ್ವಾನ ದಳ ನಿಯೇಜಿಸಬೇಕೆಂದು ಪರಿಸರ ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ.

SCROLL FOR NEXT