ಬಳ್ಳಾರಿಯ ಹಂಪಿ 
ರಾಜ್ಯ

ಕರ್ನಾಟಕದ 30 ಪಾರಂಪರಿಕ ತಾಣಗಳಿಗೆ ಸ್ವಚ್ಛತೆಯ ಸ್ಪರ್ಶ!

ಏಪ್ರಿಲ್ 18ರಂದು ಅಂತಾರಾಷ್ಟ್ರೀಯ ವಿಶ್ವ ಪರಂಪರೆ ದಿನಾಚರಣೆಗೆ ಪುರಾತತ್ವಶಾಸ್ತ್ರ ...

ಬಳ್ಳಾರಿ: ಏಪ್ರಿಲ್ 18ರಂದು ಅಂತಾರಾಷ್ಟ್ರೀಯ ವಿಶ್ವ ಪರಂಪರೆ ದಿನಾಚರಣೆಗೆ ಪುರಾತತ್ವಶಾಸ್ತ್ರ ಇಲಾಖೆ 15 ದಿನಗಳ ವೈಜ್ಞಾನಿಕ ಸ್ವಚ್ಛತಾ ಕಾರ್ಯಕ್ರಮವನ್ನು ಹಂಪಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಇಂದಿನಿಂದ ಹಮ್ಮಿಕೊಂಡಿದೆ.

ರಾಜ್ಯಾದ್ಯಂತ ಪುರಾತತ್ವ ಇಲಾಖೆ 30 ಸ್ಮಾರಕಗಳನ್ನು ಗುರುತಿಸಿದ್ದು ಅವುಗಳಲ್ಲಿ ತಲಾ 15 ಹಂಪಿ ಮತ್ತು ಬೆಂಗಳೂರು ಸುತ್ತಮುತ್ತ ಇರಲಿದೆ. ತಲೆಮಾರುಗಳಿಗೆ ಪರಂಪರೆ ಎಂಬ ಘೋಷವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ಸ್ವಚ್ಛವಾಗಿ ಮತ್ತು ಜಾಗರೂಕತೆಯಿಂದ ಇಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.

ಸ್ವಚ್ಛತಾ ಪಕವಾಡ ಹೆಸರಿನಲ್ಲಿ 15 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಸಣ್ಣ ಹಂಪಿ ಮತ್ತು ಬೆಂಗಳೂರು ವೃತ್ತದಲ್ಲಿ ನಾವು ಸ್ಮಾರಕಗಳನ್ನು ಸ್ವಚ್ಛತೆಗೆ ಆಯ್ದುಕೊಂಡಿದ್ದೇವೆ ಎಂದು ಪುರಾತತ್ವ ಸಮೀಕ್ಷೆ ಇಲಾಖೆಯ ಸೂಪರಿಂಟೆಂಡೆಂಟ್ ಕೆ. ಮೂರ್ತೀಸ್ವರಿ ತಿಳಿಸಿದ್ದಾರೆ.

ಶ್ರೀರಂಗಪಟ್ಟಣದ ದರಿಯಾ ದೌಲತ್, ಕೇಶವ ದೇವಸ್ಥಾನ, ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಮನಗೊಂಡನಹಳ್ಳಿ, ಸೋಮನಾಥಪುರದ ಕೇಶವ ದೇವಸ್ಥಾನ, ಚಿತ್ರದುರ್ಗದ ಕೋಟೆ, ದಾವಣಗೆರೆ ಹರಿಹರದ ಹರಿಹರೇಶ್ವರ ದೇವಸ್ಥಾನ, ಬಾಗ್ಲಿಯ ಕಲ್ಲೇಶ್ವರ ದೇವಸ್ಥಾನ, ಅವನಿಯ ರಾಮಲಿಂಗೇಶ್ವರ ದೇವಸ್ಥಾನ, ಕೋಲಾರದ ಕೋಲಾರಮ್ಮ ದೇವಸ್ಥಾನ ಮತ್ತು ಸೋಮೇಶ್ವರ ದೇವಾಲಯ, ಬಾರ್ಕೂರಿನ ಕಟ್ಟಲೆ ಬಸದಿ, ಚಂದ್ರಗುಟ್ಟಿ ಕೋಟೆ ಮತ್ತು ಶಿವಮೊಗ್ಗದ ರೇಣುಕಾ ದೇವಸ್ಥಾನ ಮತ್ತು ಬೆಂಗಳೂರಿನ ಟಿಪ್ಪು ಬೇಸಿಗೆ ಅರಮನೆಗಳನ್ನು ಸ್ವಚ್ಛತಾ ಕಾರ್ಯಕ್ರಮಕ್ಕೆ ಆರಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜನರ ಭಾವನೆ ಮೇಲೆ ರಾಜಕಾರಣ ಮಾಡಲ್ಲ: ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ- ಸಿಎಂ ಡಿಕೆ ಶಿವಕುಮಾರ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಪಂಚಾಯ್ತಿ ಚುನಾವಣೆ ನಡೆಸಲು ಸಚಿವ ಸಂಪುಟದ ನಿರ್ಧಾರ: EVM ಬದಲು ಮತಪೆಟ್ಟಿಗೆ ಬಳಕೆ

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! video

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!