ಬೆಂಗಳೂರು: ಗೂಡ್ಸ್ ಆಟೋ ಹರಿದು ಪೋಲೀಸ್ ಪೇದೆ ಸಾವು 
ರಾಜ್ಯ

ಬೆಂಗಳೂರು: ಗೂಡ್ಸ್ ಆಟೋ ಹರಿದು ಪೋಲೀಸ್ ಪೇದೆ ಸಾವು

ಚುನಾವಣೆ ಹಿನ್ನೆಲೆಯಲ್ಲಿ ವಾಹನ ಪರಿಶೀಲನೆಯಲ್ಲಿ ತೊಡಗಿದ್ದ ಪೋಲೀಸ್ ಪೇದೆಯೊಬ್ಬರ ಮೇಲೆ ಗೂಡ್ಸ್ ಆಟೋ ಹರಿದಿರುವ ಘಟನೆ ರಾಮನಗರ ಜಿಲ್ಲೆ ಬಿಡದಿ ಬಳಿ ನಡೆದಿದೆ.

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ವಾಹನ ಪರಿಶೀಲನೆಯಲ್ಲಿ ತೊಡಗಿದ್ದ ಪೋಲೀಸ್ ಪೇದೆಯೊಬ್ಬರ ಮೇಲೆ ಗೂಡ್ಸ್ ಆಟೋ ಹರಿದಿರುವ ಘಟನೆ ರಾಮನಗರ ಜಿಲ್ಲೆ ಬಿಡದಿ ಬಳಿ ನಡೆದಿದೆ.
ಮಹಲಿಂಗ(32) ಶನಿವಾರ ರಾತ್ರಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕರ್ತವ್ಯದಲ್ಲಿದ್ದರು. ಇನ್ನೋರ್ವ ಪೇದೆಯೊಡನಿದ್ದ ಅವರು ಬೆಂಗಳೂರಿನಿಂದ ಮೈಸೂರು ಕಡೆಗೆ ಸಾಗುತ್ತಿದ್ದ ವಾಹನಗಳನ್ನು ಪರಿಶೀಲನೆ ನಡೆಸಿದ್ದರು.
ಸುಮಾರು 10.20 ರ ವೇಳೆಗೆ ಆಗಮಿಸಿದ್ದ ಕಾರೊಂದನ್ನು ಪರಿಶೀಲಿಸುತ್ತಿದ್ದ ಮಹಲಿಂಗ ಕಾರಿನಲ್ಲಿ ಅಂತಹಾ ವಿಶೇಷ ವಸ್ತುಗಳೇನೂ ಪತ್ತೆಯಾಗಿರದ ಕಾರಣ ಅದನ್ನು ಬಿಟ್ಟು ತನ್ನ ಮಾರ್ಗದಲ್ಲಿ ವೇಗವಾಗಿ ಬರುತ್ತಿದ್ದ  ಗೂಡ್ಸ್ ಆಟೋದತ್ತ ತೆರಳಿದ್ದಾರೆ.ಆದರೆ ವೇಗವಾಗಿ ಬಂದಿದ್ದ ಗೂಡ್ಸ್ ಆಟೋ ಪೇದೆಯ ಮೇಲೆ ಹರಿದಿದೆ. 
"ಆಟೋ ಬಹಳ ವೇಗವಾಗಿ ಬಂದಿತ್ತು. ಚಾಲಕನಿಗೆ ವಾಹನ ನಿಯಂತ್ರಣಕ್ಕೆ ಸಿಕ್ಕಿಲ್ಲ. ಅದರಿಂದ ಮಹಲಿಂಗ ಅವರ ಮೇಲೆ ವಾಹನ ಹರಿದಿತ್ತು. ಅವರು ವಾಹನದಡಿ ಸಿಕ್ಕಿ ಮೈಯೆಲ್ಲಾ ಗಾಯವಾಗಿದ್ದವು. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೂ ಆತ ಕೆಲವೇ ನಿಮಿಷಗಳಲ್ಲಿ ಅಸುನೀಗಿದ್ದರು" ಪೋಲೀಸರು ಹೇಳಿದ್ದಾರೆ./

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!