ರಾಜ್ಯ

ಬೆಂಗಳೂರು ಜೈಲಿನಲ್ಲಿ ವೀರಪ್ಪನ ಸಹಚರ ಸೈಮನ್ ಸಾವು

Shilpa D
ಮೈಸೂರು: ಬಹು ಅಂಗಾಂಗ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ವೀರಪ್ಪನ್‌ ಸಹಚರ ಸೈಮನ್‌,ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 
ಕೊಳ್ಳೇಗಾಲದ ಪಾಲಾರ್‌ ಸೇತುವೆಯನ್ನು ಬಾಂಬ್‌ನಿಂದ ಸ್ಫೋಟಿಸಿ ಪೊಲೀಸ್‌ ಸಿಬ್ಬಂದಿ, ಅರಣ್ಯಾಧಿಕಾರಿಗಳೂ ಸೇರಿದಂತೆ 26 ಮಂದಿಗೆ ಸಾವಿಗೆ ಕಾರಣವಾಗಿದ್ದ ಆರೋಪಕ್ಕಾಗಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಸೈಮನ್‌ನನ್ನು ಚಿಕಿತ್ಸೆಗಾಗಿ ಏಪ್ರಿಲ್ 4 ರಂದು ಬೆಂಗಳೂರಿನ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಾರ್ತಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡ್ಡರಹಟ್ಟಿ ನಿವಾಸಿಯಾದ ಈತ, 1994 ರಲ್ಲಿ ಬಂಧಿತನಾಗಿ 23 ವರ್ಷ 2 ತಿಂಗಳು ಜೈಲು ವಾಸ ಅನುಭವಿಸಿದ್ದ.
ನ್ಯಾಯಾಧೀಶರ ಸಮ್ಮುಖದಲ್ಲಿ ಸೈಮನ್‌ ಶವಪರೀಕ್ಷೆ ನಡೆಸಿದ ವೈದ್ಯರು ಮೃತ ದೇಹವನ್ನು ಸಂಬಂಧಿಧಿಕರಿಗೆ ಒಪ್ಪಿಸಿದ್ದಾರೆ. 
ಸೇಲಂನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿದ್ದ ಗೋಪಾಲಕೃಷ್ಣ ಮತ್ತು ವೀರಪ್ಪನ್‌ ನಡುವೆ ದೊಡ್ಡ ಜಟಾಪಟಿಯೇ ನಡೆದಿತ್ತು.ಎಸ್‌ಪಿ ಗೋಪಾಲಕೃಷ್ಣ ಅವರನ್ನು ಕೊಲೆ ಮಾಡುವ ಪಣ ತೊಟ್ಟಿದ್ದ. ಇದರ ಭಾಗವಾಗಿ 1993ರಲ್ಲಿ ಪೊಲೀಸ್‌, ಅರಣ್ಯಾಧಿಕಾರಿಗಳು ಬರುತ್ತಿದ್ದ ಪಾಲಾರ್‌ ಸೇತುವೆಯನ್ನು ಸ್ಫೋಟಿಸಿ ಗುಂಡಿನ ಮಳೆ ಸುರಿಸಿದ್ದರು. ಪರಿಣಾಮವಾಗಿ 26 ಮಂದಿ ಸಾವಿಗೀಡಾಗಿ ಗೋಪಾಲಕೃಷ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 43 ಮಂದಿ ಮಹಿಳೆಯರೂ ಸೇರಿ 176 ಮಂದಿಯನ್ನು ಬಂಧಿಸಲಾಗಿತ್ತು.
SCROLL FOR NEXT