ಸಾಂದರ್ಭಿಕ ಚಿತ್ರ 
ರಾಜ್ಯ

ಸಿಇಟಿ ಪರೀಕ್ಷೆ 2018: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಶೇ.10ರಷ್ಟು ಏರಿಕೆ

ರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ). ನೀಡಿದ ಮಾಹಿತಿಯಂತೆ ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2018 ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.10.60ರಷ್ಟು ಹೆಚ್ಚಾಗಿದೆ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ). ನೀಡಿದ ಮಾಹಿತಿಯಂತೆ ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2018 ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.10.60ರಷ್ಟು ಹೆಚ್ಚಾಗಿದೆ.
2017ರ ಸಿಇಟಿ ಪರೀಕ್ಷೆಗಾಗಿ ಒಟ್ಟು 1.79 ಲಕ್ಷ  ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರೆ ಈ ಬಾರಿ 1.98 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಸಾಲಿನಲ್ಲಿ ಆಯುಶ್ ಕೋರ್ಸ್ ಗಳಿಗಾಗಿ ಸಹ ಅರ್ಜಿ ಸಲ್ಲಿಕೆಯಾಗಿತ್ತು ಆದರೆ ಈ ಭಾರಿ ಇಂಜಿನಿಯರಿಂಗ್,  ಕೃಷಿ ಮತ್ತು ಫಾರ್ಮಾ ಕೋರ್ಸ್ ಗಳಿಗೆ ಮಾತ್ರ ಅರ್ಜಿ ಸಲ್ಲಿಸಲಾಗಿದೆ.
"ವೈದ್ಯಕೀಯ ಮತ್ತು ದಂತ ವೈದುಅಕೀಯ ಶಿಕ್ಷಣಕ್ಕಾಗಿ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆ ನಡೆಸುವುದಕ್ಕೆ ರಾಜ್ಯ ಸಹಮತ ಹೊಂದಿದೆ.ಆದ ಕಾರಣ ಈ ಸಾಲಿನಿಂದ ಆಯುಶ್ ಕೋರ್ಸ್ ಗಳು ನೀಟ್ ಪರೀಕ್ಷೆಯಡಿಯಲ್ಲಿ ಬರಲಿದೆ. ಇಂಜಿನಿಯರಿಂಗ್,  ಕೃಷಿ ಮತ್ತು ಫಾರ್ಮಾ ಕೋರ್ಸ್ ಗಳಿಗೆ ಪ್ರವೇಶ ಬಯಸುವವರು ಮಾತ್ರವೇ ಸಿಇಟಿ ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ." ಕೆಇಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾವು ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಗಿಟ್ಟಿಸುವುದು ಕಠಿಣವಾಗಲಿದೆ ಎಂದು ತಿಳಿದ ಅನೇಕ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.
"ಮೊದಲು ಎಲ್ಲಾ ಕೋರ್ಸುಗಲಿಗೆ ಒಂದೇ ಪ್ರವೇಶ ಪರೀಕ್ಷೆ, ಅರ್ಜಿ ಸಲ್ಲಿಸುತ್ತಿದ್ದೆವು. ಈಗ ಎರಡು ಅರ್ಜಿ ಸಲ್ಲಿಸಬೇಕಿದೆ. ನೀಟ್ ರಾಷ್ಟ್ರಮಟ್ಟದಲ್ಲಿ ನಡೆವ ಪ್ರವೇಶ ಪರೀಕ್ಷೆ, ಅದರಲ್ಲಿ ನನಗೆ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ದೊರಕುವುದೆಂದು ನಾನು ಭಾವಿಸಲಾರೆ ಹಾಗಾಘಿ ನಾನು ಸಿಇಟಿ ಗಾಗಿ ಅರ್ಜಿ ಸಲ್ಲಿಸಿದ್ದೇನೆ" ಸಿಇಟಿ ಗಾಗಿ ಅರ್ಜಿ ಸಲ್ಲಿಸಿದ ಓರ್ವ ವಿದ್ಯಾರ್ಥಿ ಹೇಳಿದ್ದಾರೆ.
ಈ ಬಾರಿಯ ಸಿಇಟಿ ಪರೀಕ್ಷೆಗಳು ಏ. 18, 19 ಮತ್ತು 20ರಂದು ನಡೆಯಲಿದೆ.
2019ರಿಂದ ಆನ್ ಅಲಿನ್ ಸಿಇಟಿ
2019ರ ಸಾಲಿನಿಂದ ಆನ್ ಲೈನ್ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಉನ್ನತ ಮೂಲಗಳು ಹೇಳಿದಂತೆ ಮುಂದಿನ ವರ್ಷದಿಂದ ಸಿಇಟಿ ಪರೀಕ್ಷೆಗಳು ಆನ್ ಲೈನ್ ಆಗಿರಲಿದೆ. ಶಿಕ್ಷಣ ಇಲಾಖೆಯು ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ವಿಧಗಳಲ್ಲಿ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
"ಪ್ರಾರಂಭದಲ್ಲಿ ನಾವು ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ರೀತಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ.ಜೆಇಇ  ಮಾದರಿಯನ್ನೇ ಅನುಸರಿಸಿ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ" ಇಲಾಖೆಯ ಮೂಲಗಳು ಹೇಳಿದೆ.
"ನಾವು ಆನ್ ಲೈನ್ ಕೌನ್ಸಲಿಂಗ್ ಪ್ರಾರಂಭಿಸಿದ ಮೊದಲ ವರ್ಷ ಅಭ್ಯರ್ಥಿಗಳಿಗೆ ಗೊಂದಲ ಉಂಟಾಗಿತ್ತು. ಆದರೆ ನಂತರದಲ್ಲಿ ಆ ತೊಂದರೆಗಳೆಲ್ಲಾ ಕಳೆದು  ಅಭ್ಯರ್ಥಿಗಳು ಈಗ ಆನ್ ಲೈನ್ ಕೌನ್ಸಲಿಂಗ್ ಯಶಸ್ವಿಯಾಗಿ ಮುಂದುವರಿದಿದೆ. ಇದೇ ಪ್ರಕಾರವಾಗಿ ಮುಂದಿನ ವರ್ಷದಿಂದ ಆನ್ ಲೈನ್ ಪರೀಕ್ಷೆಗಳನ್ನು ನಡೆಸಲು ಯೋಜಿಸುತ್ತಿದ್ದೇವೆ "
ಆನ್ ಲೈನ್ ದಾಖಲೆ ಪರಿಶೀಲನೆ ಇಲ್ಲ?
2017ರಿಂದ ಕೆಇಎ ಅಧಿಕಾರಿಗಳು ದಾಖಲೆ ಪರಿಶೀಲನೆಯನ್ನು ಆನ್ ಲೈನ್ ಮೂಲಕ ನಡೆಸುವುದಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಇಂದಿಗೂ ಅದು ಸಂಪೂರ್ಣ ಯಶಸ್ವಿಯಾಗಿಲ್ಲ. "ದಾಖಲೆಯನ್ನು ಆನ್ ಲೈನ್ ಮೂಲಕ ಪರಿಶೀಲನೆ ನಡೆಸಲು ನಾವು  ಇತರ ಇಲಾಖೆಗಳ ಸಹಕಾರ ಪಡೆಯಬೇಕಿದೆ.ಇದು ಸುದೀರ್ಘ ಪ್ರಕ್ರಿಯೆಯಾಗಿರಲಿದೆ.ಈ ವರ್ಷ ಅದು ಸಾಧ್ಯವಾಗಲಿದೆ ಎಂದು ನಾವು ಭಾವಿಸುವುದಿಲ್ಲ" ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT