ಕಲಬುರಗಿ; ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಕೇಂದ್ರ ಚುನಾವಣೆ ಆಯೋಗ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಮಾಡಿದ ಬಳಿಕ ಈ ನಡುವೆಯೇ ಕಲಬುರಗಿ ಜಿಲ್ಲೆಯೊಂದರಲ್ಲೇ ಹಲವು ಬಾರಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ವರೆಗೂ ಪೊಲೀಸರು 186 ಎಫ್ಐಆರ್'ಗಳನ್ನು ದಾಖಲು ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕಲಬುರಗಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ವರೆಗೂ 186 ಎಫ್ಐಆರ್ ಗಳು ದಾಖಲಾಗಿವೆ ಎಂದು ನೀತಿ ಸಂಹಿತೆ ಉಲ್ಲಂಘನೆ ಅನುಷ್ಠಾನದ ಕಲಬುರಗಿ ಜಿಲ್ಲೆಯ ಅಧಿಕಾರಿ ಹಾಗೂ ಕಲಬುರಗಿ ಜಿಲ್ಲೆಯ ಅರಣ್ಯಾಧಿಕಾರಿ ಶಿವಕುಮಾರ್ ಅವರು ಹೇಳಿದ್ದಾರೆ.
180 ಎಫ್ಐಆರ್ ದಾಖಲಾಗಿದ್ದು, ಇದರಲ್ಲಿ 107 ಅಬಕಾರಿ ಇಲಾಷೆ 70 ಎಫ್ಐಆರ್ ಗಳನ್ನು ಪೊಲೀಸರು ಹಾಗೂ 3 ತಪಾಸಣಾ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. 5 ಎಫ್ಐಆರ್ ಗಳು ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮ ಹಣ ಸಾಗಾಣೆಯಲ್ಲಿ 1 ಎಫ್ಐಆರ್ ದಾಖಲಾಗಿದೆ. ದಾಳಿಯಲ್ಲಿ ಅದಿಕಾಲಿಗಳು ರೂ.17.74 ಲಕ್ಷ ಹಣವನ್ನು ಹಿರೋಳಿ ಚೆಕ್'ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.
ಈ ವರೆಗೂ ಒಟ್ಟು ರೂ.25.82 ಲಕ್ಷ ಹಣವನ್ನು ವಿವಿಧ ಜಿಲ್ಲಾ ಚೆಕ್ ಪೋಸ್ಟ್ ಗಳ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಹಿರೋಳಿಯಲ್ಲಿ ರೂ.17.74 ಲಕ್ಷ, ಬಲ್ಲುರ್ಗಿಯಲ್ಲಿ ರೂ.3 ಲಕ್ಷ, ಗುಲ್ಬರ್ಗ ಗ್ರಾಮಾಂತರದಲ್ಲಿ ರೂ. 2.8ಲಕ್ಷ, ತುಮಕೂರಿನ ಚಿಂಚೋಳ್ಳಿ ತಾಲೂಕಿನಲ್ಲಿ ರೂ.3.009 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದಲ್ಲೆ. ರೂ.6,25,651 ಮೌಲ್ಯದ 2,238 ಲೀಟರ್ ಮದ್ಯವನ್ನು ವಶಕ್ಕೆ ಪಡಿದುಕೊಳ್ಳಲಾಗಿದ್ದು, 27 ದ್ವಿಚಕ್ರ ವಾಹನಗಳು ಹಾಗೂ 3 ತ್ರಿಚಕ್ರ ವಾಹನ ಹಾಗೂ 4 ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics